ತುಮಕೂರು: ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿಯಲ್ಲಿ ನಡೆದಿರುವ ಮೀಸಲಾತಿ ಉಲ್ಲಂಘನೆ, ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಹೈ ಕೋರ್ಟ್ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
ತುಮುಲ್ ನೇಮಕಾತಿ ಅಧಿಸೂಚನೆ ಹೊರಬಿದ್ದ ಕ್ಷಣದಿಂದ ತುಮುಲ್ ಆಡಳಿತ ಮಂಡಳಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ರಜಾಕಹಳೆ ನಿರಂತರ ವರದಿಯನ್ನು ಪ್ರಕಟಿಸುತ್ತಿದ್ದು, ಪ್ರಜಾಕಹಳೆಯ ಏಕಾಂಗಿ ಹೋರಾಟಕ್ಕೆ ಫಲಸಿಕ್ಕಿದ್ದು, ಹೈಕೋರ್ಟ್ ನಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ತಡೆಯಾಜ್ಞೆ ನೀಡಿದ್ದು, ಉಳಿದ ನಾಲ್ಕು ಪ್ರಕರಣಗಳ ವಿಚಾರಣೆ ಬಾಕಿ ಇದೆ.