ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪ್ರಧಾನಿಗಳು ಬಿಡುವಿಲ್ಲದ ಸಮಯದಲ್ಲಿ ತಾಯಿಯವರನ್ನು ಭೇಟಿ ಹಾರೈಕೆ ಮಾಡುತ್ತಿದ್ದರು, ದೇವರು ದುಃಖ ವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ಶತಾಯುಷಿ ಹೀರಾಬೆನ್ ಅವರಿಗೆ ದೇವರು ಸುಧೀರ್ಘವಾದ ಬದುಕು ನೀಡಿದ್ದಾನೆ, ನರೇಂದ್ರ ಮೋದಿ ಅವರು ತಾಯಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು, ಮೋದಿ ಅವರು ತಾಯಿ ಅಗಲಿಕೆಯ ದುಃಖದಿಂದ ಶೀಘ್ರ ಹೊರಬಂದು ದೇಶದ ಸೇವೆಯನ್ನು ಮಾಡಲು ಭಗವಂತ ಧೈರ್ಯ ನೀಡಲಿ ಎಂದು ಹಾರೈಸಿದರು.