
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತುಮಕೂರು ಜಿಲ್ಲಾ ಘಟಕದ ವತಿಯಿಂದ ಡಿ.23
ಮತ್ತು 24ರಂದು ನಡೆದ ತುಮಕೂರು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ
ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು
ಶೆಟ್ಟಿಕೆರೆ ಹೋಬಳಿಯ ರಾಜಸ್ವ ನಿರೀಕ್ಷಕರಾದ ಆಸಿಫ್ ಖಾನ್ ಅವರು ಕೇರಂ (ಸಿಂಗಲ್ಸ್)
ನಲ್ಲಿ ಪ್ರಥಮ ಬಹುಮಾನಗಳಿಸುವ ಮೂಲಕ ಸತತ ಮೂರು ವರ್ಷಗಳಿಂದ ಗೆಲ್ಲುವ ಮೂಲಕ
ಹ್ಯಾಟ್ರಿಕ್ ಗಳಿಸಿಕೊಂಡಿದ್ದಾರೆ.