ಕುಸ್ತಿ ಪಂದಾವಳಿ ಉದ್ಘಾಟನೆ ಮಾಡಿದ ಸಚಿವ ಆನಂದಸಿಂಗ್

ಗಿರೀಶ್
1 Min Read

ಚದುರಿದ ವೇದಿಕೆಗಳ ನಿರ್ಮಾಣದಿಂದ ಮುಖ್ಯ ವೇದಿಕೆಯಲ್ಲಿ ಜನರ ಕೊರತೆ

ಹಂಪಿ ಉತ್ಸವದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ದೂರ ದೂರದಲ್ಲಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ವಸ್ತು ಪ್ರದರ್ಶನ ಮಳಿಗೆಗಳು ಗಾಯಿತ್ರಿ ಮುಖ್ಯ ವೇದಿಕೆಯಿಂದ ದೂರದಲ್ಲಿವೆ. ಇವು ಹತ್ತಿರದಲ್ಲಿ ಇದ್ದಿದ್ದರೆ ಜನರು ವಸ್ತು ಪ್ರದರ್ಶನದ ಜೊತೆಗೆ ಮುಖ್ಯ ವೇದಿಕೆಯ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಿಸುತ್ತಿದ್ದರು. ಚದುರಿದ ವೇದಿಕೆ ನಿರ್ಮಾಣದಿಂದ ಮುಖ್ಯ ವೇದಿಕೆಯಲ್ಲಿವ ಜನರ ಕೊರತೆಯಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಕುಸ್ತಿ ಪಂದಾವಳಿ ಉದ್ಘಾಟನೆ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ರೀತಿಯಲ್ಲಿ ಹಂಪಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಆಗುವುದಿಲ್ಲ. ವಿಶ್ವ ಪಾರಂಪರಿಕ ಸ್ಮಾರಕಗಳಿರುವ ಸ್ಥಳದಲ್ಲಿ ಸಾಕಷ್ಟು ಬಿಗಿ ನಿಯಮಗಳು ಇರುತ್ತವೆ. ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸಾಕಷ್ಟು ಸಭೆಗಳನ್ನು ನಡೆಸಿ ಉತ್ಸವದ ಸಿದ್ಧತೆ ಕೈಗೊಂಡಿದ್ದಾರೆ. ಇಂದು ಹಾಗೂ ನಾಳಿನ ಹಂಪಿ ಉತ್ಸವದಲ್ಲಿ ಜನರು ಸೇರಲಿದ್ದಾರೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು. ಗಾಯಿತ್ರಿ ಪೀಠದ ವೇದಿಕೆವರೆಗೂ ಸಾರ್ಜನಿಕರಿಗೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಯಾವುದೇ ಪಾಸ್‌ಗಳ ನಿರ್ಬಂಧವಿಲ್ಲ ಎಂದು ತಿಳಿಸಿದರು.

 

Share this Article
Verified by MonsterInsights