ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಮಕ್ಕಳು ಹಾಗೂ ಯುವಕರು ಬಿರುಬಿಸಿಲಿನ ನಡುವೆ ಸಾಹಸ ಕ್ರೀಡೆಗಳಿಗೆ ತಮ್ಮನ್ನು ತೊಡಗಿಸಿಕೊಂಡರು.
ಹಂಪಿ ಉತ್ಸವದ ಆಚರಣೆ ಅಂಗವಾಗಿ ಹಂಪಿಯ ಸಾಸುವೆಕಾಳು ಗಣಪ ವೇದಿಕೆಯ ಸಮೀಪದ ಕಲ್ಲುಬಂಡೆಗಳಲ್ಲಿ ಸಾಹಸಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಬಿರುಬಿಸುಲಿಗೆ ಕಾದಿದ್ದ ಬಂಡೆಗಳನ್ನು ಯುವಕರು ಹತ್ತುವ ಮೂಲಕ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡರು. ಪರಿಣಿತರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗೆ ಸಹಾಯವಾಗಿದ್ದು, ಸುರಕ್ಷಿತ ಕಿಟ್‌ಗಳನ್ನು ಅಳವಡಿಸಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಸಹಕರಿಸಿದರು.
ಸುರಕ್ಷಿತ ಕಿಟ್‌ಗಳನ್ನು ಧರಿಸಿ ಬಂಡೆಗಳನ್ನು ಹತ್ತುವ ಮೂಲಕ ಯುವಕರು, ಮಕ್ಕಳು ಸಾಹಸದ ರೋಚಕ ಅನುಭವವನ್ನು ಪಡೆದರು.ಬಂಡೆ ಹತ್ತುವುದು ಸೇರಿದಂತೆ ಬಿಲ್ಲುಗಾರಿಕೆ, ಪ್ರದರ್ಶನವನ್ನು ಆಯೋಜಿಸಲಾಗಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಾಹಸ ಕ್ರೀಡೆಗಳನ್ನು ಉದ್ಘಾಟಿಸಿದರು.