ತುಮಕೂರು: ರಸ್ತೆಗೆ ಅಡ್ಡ ನಿಲ್ಲಬೇಡಿ, ಹೆಂಗಸರು ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ ಸರ‍್ವಜನಿಕರ ಮೇಲೆ ಜೆಡಿಎಸ್ ಮುಖಂಡ ಗೋವಿಂದರಾಜು ಬೆಂಬಲಿಗರು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ರಾತ್ರಿ ಜೆಡಿಎಸ್ ಮುಖಂಡ ಗೋವಿಂದರಾಜು ರವರ ಬೆಂಬಲಿಗರು ಉದ್ಯಮಿ, ಜೆಡಿಎಸ್ ಮುಖಂಡ ಅಟಿಕಾ ಬಾಬು ಅವರ ಕಾರಿಗೆ ಮುತ್ತಿಗೆ ಹಾಕಿದ್ದಾಗ, ಚಿಕ್ಕಪೇಟೆಯ ಸುಹೇಲ್ ಪಾಷ ಅವರು ರ‍್ಗಾ ಬಳಿ ಹೀಗೆ ಮಾಡ್ಬೇಡಿ, ಇಲ್ಲಿಂದ ಹೋಗಿ, ಟ್ರಾಫಿಕ್ ನಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದರಿಂದ ರೊಚ್ಚಿಗೆದ್ದ 08 ರಿಂದ 10 ಜನ ಗೋವಿಂದರಾಜು ಕಡೆಯ ಕಿಡಿಗೇಡಿಗಳು ಹತ್ಯೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಗೋವಿಂದರಾಜು (ಗೆಳೆಯರ ಬಳಗ) ಕಡೆಯವರಾದ ಇಮ್ರಾನ್, ಸಿದ್ದಿಕ್ ಅವರ ಸಹಚರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕಾಲುಗಳಿಗೆ ನನಗೆ ಗುದ್ದಿ, ನನ್ನ ಮೇಲೆ ಹಲ್ಲೆಮಾಡಿ ನೀನು ಅವರಿಗೆ ಸಪರ‍್ಟ್ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಮುಖಕ್ಕೆ, ಕೈಕಾಲುಗಳಿಗೆ ಹೊಡೆದಿದ್ದು, ಗೋವಿಂದರಾಜು (ಗೆಳೆಯರ ಬಳಗ) ಕಡೆಯವರಾದ ಇಮ್ರಾನ್, ಸಿದ್ದಿಕ್ ಮತ್ತು ಸಹಚರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಠಾಣೆ ಪ್ರಕರಣ ದಾಖಲಾಗಿದೆ.