ಗುಬ್ಬಿ: ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತಗೊಂಡಿದ್ದರಿಂದ ಆತಂಕಗೊಂಡ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸುಭಾಷ್ ನಗರದ ಸಿದ್ದಪ್ಪ (60)ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ರೈತ, ಬಹಳ ವರ್ಷದಿಂದ ಅಡಿಕೆ ಕೃಷಿ ಮಾಡಿಕೊಂಡು ಬಂದಿರುವ ಸಿದ್ದಪ್ಪ ಅವರು ಅಡಿಕೆ ಚೇಣಿ ಸಹ ಮಾಡಿದ್ದಾರೆ ಇತ್ತೀಚಿಗೆ ಅಡಿಕೆ ಧರವು ತೀವ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅತ್ಯಂತ ಹೆಚ್ಚು ಈ ವರ್ಷ ಮಳೆಬಿದ್ದಿದ್ದು ಈ ಬಾರಿ ಅಡಿಕೆ ದರ ಸಾಕಷ್ಟು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ ಸಿದ್ದಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಗಾರದಲ್ಲಿ ಶವ ಪರೀಕ್ಷೆ ನಡೆಸಲಾಯಿತು.ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.