ಅಂಬೇಡ್ಕರ್ ನನ್ನ ದೇವರು, ಧರ್ಮಸ್ಥಳ ಮಂಜುನಾಥನೇ ಉತ್ತರಿಸುತ್ತಾನೆ: ಅಟಿಕಾ ಬಾಬು

ಡೆಸ್ಕ್
1 Min Read

ತುಮಕೂರು: ನಾನು ನಂಬುವ ದೇವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶದಲ್ಲೊ ನಡೆಯುವವನು ನಾನು,   ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಸತ್ಯ ಎಂದು ಅಟಿಕಾ ಬಾಬು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಂದಲೇ ನಾನು ಇಲ್ಲಿಯವರೆಗೆ ಬಂದಿದ್ದೇನೆ, ುಧರ್ಮಸ್ಥಳದ ಮಂಜುನಾಥನನ್ನು ನಂಬುತ್ತೇನೆ, ನನ್ನ ಮೇಲೆ ನಡೆಯುತ್ತಿರುವ ರಾಜಕೀಯ ಪ್ರೇರಿತ ಸುಳ್ಳು ವದಂತಿಗಳಿಗೆ ಮಂಜುನಾಥನೇ ಉತ್ತರ ಕೊಡುತ್ತಾನೆ ಎಂದರು.

ಪಂಚರತ್ನಯಾತ್ರೆಗೆ ಹಣ ಖರ್ಚು ಮಾಡಿದ್ದು ನಾನೇ:ಡಿಸೆಂಬರ್ 01ರಂದು ತುಮಕೂರು ನಗರದಲ್ಲಿ ನಡೆದ ಪಂಚರತ್ನ ಯಾತ್ರೆಯ ಸಂಪೂರ್ಣ ಖರ್ಚು ನನ್ನದೆ ಆಗಿದೆ. 2023ರ ಚುನಾವಣೆಯಲ್ಲಿ ತುಮಕೂರು ನಗರದಿಂದ ನಾನು ಶಾಸಕನಾಗಿ ಆಯ್ಕೆಯಾಗುವುದು ಖಚಿತ. ಸ್ಪತಂತ್ರವಾಗಿ ಸ್ಪರ್ಧಿಸುವುದಿಲ್ಲ. ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ. ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ಹೆಚ್.ಡಿ.ಕುಮಾರಸ್ವಾಮೀಯೇ ನಮ್ಮ ನಾಯಕರು ಎಂದು ಆಟಿಕಾ ಬಾಬು ನುಡಿದರು

ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಕಳ್ಳತನದ ಮಾಲು ಖರೀದಿ ಮತ್ತು ಎರಡನೇ ಹೆಂಡತಿಯ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಆಂಧ್ರ ಪೊಲೀಸರು ಆಟಿಕಾ ಬಾಬು ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಬಿತ್ತರವಾಗಿದ್ದು, ಇದು ಸತ್ಯಕ್ಕೆ ದೂರವಾದ ವರದಿಯಾಗಿದೆ.ಯಾವ ರಾಜ್ಯದ ಪೊಲೀಸರು ನನ್ನನ್ನು ಬಂಧಿಸಿಲ್ಲ ಎಂದರು.

ನನ್ನ ಸಾಕು ಮಗನ ಕುಟುಂಬದಲ್ಲಿ ನಡೆದ ಘಟನೆ ಕುರಿತಂತೆ ಆಂಧ್ರದ ಹೇಲೂರು ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ನನ್ನ ವಿನಾಕಾರಣ ನನ್ನ ಕುಟುಂಬದವರನ್ನು ಸೇರಿಸಿ ದೂರು ದಾಖಲಾಗಿತ್ತು.ಅದಕ್ಕಾಗಿ ಏಲೂರು ಪೊಲೀಸರು ನನಗೆ ಸಿಆರ್ಪಿಸಿ 41ರ ಅಡಿಯಲ್ಲಿ ನೊಟೀಸ್  ನೀಡಿದ್ದರು. ಸದರಿ ನೊಟೀಸ್ ಗೆ ಉತ್ತರ ನೀಡಲು ಆಂಧ್ರ ಪ್ರದೇಶದ ಪೊಲೀಸರೊಂದಿಗೆ ತೆರಳಿದ್ದೆನು.ಇದನ್ನು ಬಿಟ್ಟರೆ ಕಳ್ಳ ಮಾಲು ಖರೀದಿ, ಎರಡನೇ ಹೆಂಡತಿ ಇವೆಲ್ಲವೂ ಕಪೋಲಕಲ್ಪಿತ ಸುದ್ದಿಗಳಾಗಿವೆ ಎಂದರು.

ಕಳ್ಳತನದ ಮಾಲುಗಳನ್ನು ಖರೀದಿಸದಂತೆ ತಡೆಯುವ ನಿಟ್ಟಿನಲ್ಲಿಯೆ ನಮ್ಮ ಕಂಪನಿ ಇರುವ ಐದು ರಾಜ್ಯಗಳಲ್ಲಿರುವ ಶಾಖೆಗಳಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ.ಅವರ ಪರಿಶೀಲನೆಯ ನಂತರವು ಕೆಲವೊಮ್ಮೆ ಕಳ್ಳ ಮಾಲು ಖರೀದಿಯಾದರೆ ಅದನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ವರ್ಷಕ್ಕೆ 1200-1500 ಕೋಟಿ ವ್ಯವಹಾರ ನಡೆಯುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ ಎಂದರು.

Share this Article
Verified by MonsterInsights