ವಿವಾಹೇತರ ಸಂಬಂಧಕ್ಕೆ ಭಾರತೀಯರ ಒಲವು, ದೇಶ ಎತ್ತ ಹೋಗುತ್ತಿದೆ..?

ಭಾರತೀಯ ವಿವಾಹಿತರು ಡೇಟಿಂಗ್ ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬ ಕೂತುಹಲಕಾರಿ ವಿಚಾರವನ್ನು ಡೇಟಿಂಗ್ ಆ್ಯಪ್ ಬಹಿರಂಗಪಡಿಸಿದೆ.

ಫ್ರಾನ್ಸ್ ಮೂಲದ ಡೇಟಿಂಗ್ ಆ್ಯಪ್ ಗ್ಲಿಡೆನ್ (Gleeden) ತಮ್ಮ ಆ್ಯಪ್ ಒಂದು ಕೋಟಿ ಮಂದಿ ಯೂಸರ್ಸ್ ಪಡೆದ ವಿಚಾರವನ್ನು ಹಂಚಿಕೊಂಡಿದ್ದು, ಅದರಲ್ಲಿ ಶೇ.20ರಷ್ಟು ಬಳಕೆದಾರರು ಭಾರತೀಯರು ಎಂಬ ವಿಚಾರವನ್ನು ತಿಳಿಸಿದೆ.

ಕಳೆದ ಸೆಪ್ಟೆಂಬರ್ ನಿಂದ ಆ್ಯಪ್ ಬಳಕೆದಾರರ ಪ್ರಮಾಣ ಶೇ.11ರಷ್ಟು ಹೆಚ್ಚಳವಾಗಿದ್ದು, ಸಾಮಾಜಿಕವಾಗಿ ಆರ್ಥಿಕ ಸ್ಥಿತಿವಂತರೇ ಹೆಚ್ಚಾಗಿ ಡೇಟಿಂಗ್ ಆ್ಯಪ್ ಬಳಸುತ್ತಿದ್ದು, 36 ವರ್ಷ ಮೇಲ್ಪಟ್ಟ ಪುರುಷರು, 26 ವರ್ಷ ಮೇಲ್ಪಟ್ಟ ಮಹಿಳೆಯರು ಈ ಆ್ಯಪ್ ಬಳಸುತ್ತಿದ್ದು, ಹೆಚ್ಚಿನ ಮಂದಿ ಐಟಿ ವಲಯಕ್ಕೆ ಸೇರಿದವರಾಗಿದ್ದಾರೆ.

ವಿವಾಹಿತರಿಗಾಗಿಯೇ ಇರುವ ಗ್ಲಿಡೆನ್ ಆ್ಯಪ್ ಬಳಸುತ್ತಿರುವ ಭಾರತದ ಶೇ.20 ರಷ್ಟು ಮಂದಿ, ಭಾರತೀಯ ಸಂಪ್ರದಾಯ ಏಕ ಪತಿ-ಪತ್ನಿತ್ವವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು, ತೆರೆಯ ಹಿಂದೆ ವಿವಾಹೇತರ ಸಂಬಂಧಗಳಿಗೆ ಅವಕಾಶ ಕಲ್ಪಿಸಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ ಎನ್ನುವುದು ನಿಮಗೂ ಗೊತ್ತಿದೆ ಅಲ್ವೇ..?

Verified by MonsterInsights