ಶಿರಾ: ಕಚ್ಚಾ ಬಾಂಬ್ ಸ್ಫೋಟವಾದ ಕಾರಣ ನಾಯಿಯೊಂದು ಬಲಿಯಾದ ಘಟನೆ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾದೇನಹಳ್ಳಿಯಲ್ಲಿ ಜರುಗಿದೆ.
ಗ್ರಾಮದ ಪ್ರಾಥಮಿಕ ಶಾಲಾ ಕಾಂಪೌಂಡ್ ಬಳಿ ಆಡುತ್ತಿದ್ದ ಮಕ್ಕಳಿಗೆ ಬಣ್ಣದ ದಾರದಲ್ಲಿ ಸುತ್ತಿದ್ದ ಚಂಡಿನಂಥ ವಸ್ತು ಕಂಡು ಬಂದಿದ್ದು, ಅದನ್ನು ಓರ್ವ ಬಾಲಕ ತನ್ನ ಮನೆಗೆ ಒಯ್ದಿದ್ದಾನೆ, ಯಾವುದೇ ಮಾಟ ಮಂತ್ರಕ್ಕೆ ಬಳಸಿದ ವಸ್ತುವನ್ನು ಮನೆಗೆ ತಂದಿದ್ದಾರೆ ಎಂದು ಭಾವಿಸಿದ ಬಾಲಕನ ತಂದೆ ಅದನ್ನು ಮನೆಯಿಂದ ದೂರಕ್ಕೆ ಬಿಸಾಡಿದ್ದಾನೆ.
ಈ ವೇಳೆ ನಾಯಿಯೊಂದು ಅದನ್ನು ಕಚ್ಚಿದ್ದು, ನಾಯಿ ಕಚ್ಚಿದ ಕೂಡಲೇ ವಸ್ತು ಸ್ಫೋಟಗೊಂಡಿದ್ದು, ಸ್ಫೋಟಕ್ಕೆ ಸಿಲುಕಿದ ನಾಯಿಯ ಬಾಯಿ ಛಿದ್ರಗೊಂಡು ಶ್ವಾನ ಸ್ಥಳದಲ್ಲೇ ಅಸುನೀಗಿದೆ, ಆಟದ ಚಂಡು ಎಂದು ಭಾವಿಸಿದ್ದ ವಸ್ತು ಸ್ಪೋಟಗೊಂಡಿದ್ದಕ್ಕೆ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ, ವಿಷಯ ತಿಳಿದ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಗೊಂಡಿದ್ದಾರೆ