ತುಮಕೂರು (TUMAKURU): ಆನ್ ಲೈನ್ ವ್ಯವಹಾರದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಗೆ ವಂಚನೆಯಾಗಿದ್ದು, ಈ ಬಗ್ಗೆ ತುಮಕೂರು ಸೆನ್(CEN) ಠಾಣೆಗೆ ದೂರು ನೀಡಿದ್ದಾರೆ.
ಎಸ್, ಎಸ್ ಸರ್ಕಲ್ ನಲ್ಲಿರುವ ಎನ್ ಸಿಸಿ ಮಿಲಿಟರಿ ಕಮಾಂಡೆಂಟ್ ಎಂದು ಫೋನ್ ಮಾಡಿದ ಸೈಬರ್ (CYBER) ಕಳ್ಳರು, ಆಫೀಸ್ ರಿನೋವೇಷನ್ ಮಾಡಿಸಲು 80 ಟನ್ ಜಲ್ಲಿ ಬೇಕಾಗಿದೆ ಎಂದು ದಿಲೀಪ್ ಅವರಿಗೆ ಹೇಳಿದ್ದಾರೆ. ಈ ಬಗ್ಗೆ ಮಿಲಿಟರಿ ಅಕೌಂಟೆಂಟ್ ಹಣದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದು, ಇನ್ನೊಂದು ನಂಬರ್ ನಿಂದ ದಿಲೀಪ್ ಕುಮಾರ್ ಗೆ ಕರೆ ಮಾಡಿ ನಾನು ಮಿಲಿಟರಿ ಅಕೌಂಟೆಂಟ್ , ಅಡ್ವಾನ್ಸ್ (ADVANCE AMMOUNT) ಹಾಕುತ್ತೇನೆ ನಾನು ಕಳುಹಿಸುವ ಕ್ಯೂ ಆರ್ ಕೋಡ್ ಗೆ 1 ರೂ ರೂಪಾಯಿ ಹಣ ಹಾಕಿ ಎಂದು ಹೇಳಿದ್ದಾರೆ.
ಅವರು ಹೇಳಿದಂತೆಯೇ ದಿಲೀಪ್ ಕುಮಾರ್ ಸೈಬರ್ (CYBER) ಕಳ್ಳರು, ನೀಡಿದ ಕ್ಯೂ ಆರ್ ಕೋಡ್ ಗೆ ಒಂದು ರೂಪಾಯಿ ಹಣ ಹಾಕಿದ್ದು, ಸೈಬರ್ ಕಳ್ಳರು 2 ರೂಪಾಯಿ ಕಳುಹಿಸಿದ್ದಾರೆ, ನಂತರ ಸ್ಕ್ಯಾನರ್ ಕಳುಹಿಸಿ, ಇದನ್ನು ಸ್ಕ್ಯಾನ್ ಮಾಡಿದರೆ ನಿಮಗೆ 40 ಸಾವಿರ ಸಿಗುತ್ತದೆ ಎಂದಿದ್ದಾರೆ.
ಅಡ್ವಾನ್ಸ್ ಹಣಕ್ಕಾಗಿ ಸ್ಕ್ಯಾನ್ ಮಾಡಿದಾಗ ಹಣ ಬರುವ ಬದಲಿಗೆ ದಿಲೀಪ್ ಕುಮಾರ್ ಅವರ ಅಕೌಂಟಿನಿಂದಲೇ 37,900 ರೂಪಾಯಿಯನ್ನು ವರ್ಗಾಯಿಸಿಕೊಂಡಿದ್ದಾರೆ. ಅಕೌಂಟಿನಲ್ಲಿದ್ದ ಹಣ ವರ್ಗಾವಣೆ ಆದ್ದರಿಂದ ಶಿವಕುಮಾರಸ್ವಾಮೀಜಿ ಸರ್ಕಲ್ ನಲ್ಲಿರುವ ಎನ್ ಸಿಸಿ ಕಚೇರಿಗೆ ಹೋದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಜಲ್ಲಿ ವ್ಯಾಪಾರ ಮಾಡುತ್ತೇನೆ ಎಂದು ನಂಬಿಸಿ ಹಣ ವರ್ಗಾವಣೆ ಮಾಡಿಕೊಂಡಿರುವವ ಮೇಲೆ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.