ತುಮಕೂರು: ಬಾವಿಯಲ್ಲಿ ಎರಡು ಅಪರಿಚಿತ ಶವ ಪತ್ತೆಯಾಗಿದ್ದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿರುವ ಘಟನೆ ಶಿರಾ ತಾಲ್ಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಶಿರಾ ನಗರದ ಚಿಕ್ಕಕೆರೆ ಹಿಂಭಾಗದಲ್ಲಿಬೊಪ್ಪಜ್ಜ ಎಂಬುವವರಿಗೆ ಸೇರಿದ ಬಾವಿಯಲ್ಲಿ ಒಬ್ಬ ಮಹಿಳೆ, ಮತ್ತೊಂದು ಹೆಣ್ಣು ಮಗುವಿನ ಶವ ಪತ್ತೆಯಾಗಿದೆ.
ತುಮಕೂರು ಮೂಲದ ಹಾಜಿರಾ (40) ಮತ್ತು ಅಮ್ಮನ್ ಪಾಷಾ (12) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.
ಯಾರೋ ಕೊಲೆ ಮಾಡಿ ತಂದು ಬಾವಿಗೆ ಎಸೆದಿರೋ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಶಿರಾ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.