ತುಮಕೂರು: ಬಿಜೆಪಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೆವೆ ಅಂತಾ ಹೇಳಿದ್ದಾರೆ ಹೊರತು, ದಲಿತರ ಸಂವಿಧಾನ ಬದಲಿಸುತ್ತೆವೆ ಅಂತಾ ಹೇಳಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ವಿವಾದಕ್ಕೆ ಗ್ರಾಸವಾಗಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸುವುದು ಹೇಳಿದ್ದಕ್ಕೆ 5 ಬಾರಿ ಸಂಸದರಾಗಿದ್ದರು ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೊಟ್ಟಿಲ್ಲ, ಸಂವಿಧಾನ ಬದಲಿಸುತ್ತೇವೆ ಎಂದು ಅವರು ಹೇಳಿದರು ಆದರೆ ಅದು ದಲಿತರ ಸಂವಿಧಾನವಲ್ಲ ಎಂದು ಹೇಳಿದ್ದಾರೆ.
ಯಾರೋ ದಾರೀಲಿ ಹೋಗೊ ದಾಸಯ್ಯ ಹೇಳಿದ್ರೆ ಯಾವ ದಲಿತರು ಕೇಳಲ್ಲ. ಪ್ರಧಾನ ಮಂತ್ರಿ, ಮಂತ್ರಿಗಳು, ರಾಜ್ಯಾಧ್ಯಕ್ಷರುಗಳು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ರೆ ಅದು ಪರಿಣಾಮ ಬೀರುತ್ತದೆ ಎನ್ನುವ ಮೂಲಕ ಸಂವಿಧಾನವನ್ನು, ದಲಿತರ ಸಂವಿಧಾನ ಎಂದು ಸುರೇಶ್ ಗೌಡ ಹೇಳಿದ್ದು ವಿವಾಕ್ಕೆ ಗ್ರಾಸವಾಗಿದೆ.
2 ಸಾವಿರ ಭಿಕ್ಷೆ: ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಯಡಿ ಮಹಿಳೆಯರಿಗೆ ನೀಡುವ 2 ಸಾವಿರ ರೂಗಳನ್ನು ಭಿಕ್ಷೆ ಎಂದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಾದ್ರೂ ಕೂಡ,ಬಡವರಿಗೆ 2ಸಾವಿರ ಬಿಕ್ಷೆ ಕೊಡುವ ಕೆಲಸವನ್ನ ಈ ಸರ್ಕಾರ ಮಾಡ್ತಿದೆ ಎಂದು ದೂರಿದರು.
ಎರಡು ಸಾವಿರ ಕೊಟ್ರೆ ಯಾರಾದ್ರೂ ಆರ್ಥಿಕವಾಗಿ ಶ್ರೀಮಂತ ಆಗಲಿಕ್ಕೆ ಆಗುತ್ತಾ.. ಮೋದಿಯವರು ರೈತರಿಗೆ 6000 ಕೊಡ್ತಿದ್ದಾರೆ. ರೈತರಿಗೆ ಕಷ್ಟ ಕಾಲದಲ್ಲಿ ರಸಗೊಬ್ಬರ, ಬಿತ್ತನೆಬೀಜ ಖರಿದಿಸಲಿ ಅಂತಾ ಕೊಡ್ತಾರೆ. ಆದ್ರೆ ಇವರು 2 ಸಾವಿರ ಹಣದಲ್ಲಿ ಶ್ರೀಮಂತರನ್ನ ಮಾಡಿ ಬಿಡ್ತಿವೆ ಅಂತಾ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ ಎಂದರು.