ತಿಪಟೂರು: ಕಾಂಗ್ರೆಸ್ ಮೋದಿ ಸಾವನ್ನು ಬಯಸುತ್ತಿದೆ, ಜನರು ಮೋದಿ ಅಧಿಕಾರದಿಂದ ಇಳಿಯುವುದೇ ಬೇಡ ಎನ್ನುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ತಿಪಟೂರಿನಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಮಾತನಾಡದ ರಾಹುಲ್ ಗಾಂಧಿ ಬ್ರಿಟನ್ ಗೆ ಹೋಗಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಾರೆ ಇಲ್ಲಿನ ಜನರಿಗೆ ಅನಿಸದೇ ಇರುವುದು ಕಾಂಗ್ರೆಸ್ಸಿಗರಿಗೆ ಯಾಕೆ ಅನಿಸುತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರಿಗೆ ಚುನಾವಣೆ ಬಂದ ತಕ್ಷಣ ಪ್ರಜಾಪ್ರಭುತ್ವ ನೆನಪಿಗೆ ಬರುತ್ತದೆ, ಸೋತ ತಕ್ಷಣ ಪ್ರಜಾಪ್ರಭುತ್ವ ಅಪಾತದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಾರೆ, ನೀವೆ ಹೇಳಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ ಎಂದು ಜನಸ್ತೋಮ ವನ್ನು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ರಾಜ್ಯದ 4 ಕೋಟಿ ಜನರಿಗೆ ಪಡಿತರ ದೊರೆತಿದೆ, ಕೃಷಿ ಸನ್ಮಾನ್ ಯೋಜನೆಯಡಿ ರಾಜ್ಯದ ರೈತರಿಗೆ ಅನುಕೂಲವಾಗಿದೆ ಎಂದರು.
ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ 11 ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ, ಎಕ್ಸ್ ಪ್ರೆಸ್, ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲಾಗಿದೆ ಎಂದರು.
ಕರ್ನಾಟಕ ದೇಶದಲ್ಲಿ ಇನ್ನೋವೇಶನ್ ನಲ್ಲಿ ನಂಬರ್ ಒನ್ ಇದೆ. ಸ್ಟಾರ್ಟ್ ಅಪ್ ನಲ್ಲಿ ನಂಬರ್ ಒನ್ ಇದೆ ಕರ್ನಾಟಕ ಹೀಗೆ ಅಭಿವೃದ್ಧಿ ಪಥದಲ್ಲಿ ಇರಬೇಕಾದರೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.