ಬೆಂಗಳೂರು: ಇಂದು 14ನೇ ಬಾರಿ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿದ್ದು, ಈ ಮೂಲಕ ಹೊಸ ಇತಿಹಾಕ್ಕೆ ನಾಂದಿ ಹಾಡಲಿದ್ದಾರೆ. ಈಗಾಗಲೇ ವಿಧಾನಸಭೆಗೆ ಆಗಮಸಿರುವ ಸಿಎಂ ತಮ್ಮ ಕಚೇರಿಂದ ಮಧ್ಯಾಹ್ನ 12ಕ್ಕೆ ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಹತ್ತು ಗಂಟೆ ನಡೆದ ಸಿಎಲ್‌ಪಿ ಸಭೆಯಲ್ಲಿ ಎಲ್ಲಾ ಶಾಸಕರು ಮತ್ತು ಸಚಿವರ ಜೊತೆಗೆ ಮಹತ್ವದ ಚರ್ಚೆಯನ್ನು ನಡೆಸಿದರು.
ಇನ್ನೂ ಕಲ್ಪತರು ನಾಡು ತುಮಕೂರು ಜನತೆಯಲ್ಲಿ ಕೂಡ ಈ ಬಾರಿಯ ಬಜೆಟ್‌ನಲ್ಲಿ ನಮಗೆ ಏನೆಲ್ಲ ಸಿಗಲಿದೆ ಎನ್ನುವ ಕೂತುಹಲ ಮೂಡಿಸಿದ್ದು, ಅದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.