ತುಮಕೂರು: ರಾಯಗಾಲುವೆ ಸ್ವಚ್ಛಗೊಳಿಸಿದ ಕಾರಣ ಬೆಳೆದಿದ್ದ ಗಿಡಗಂಟೆಯಲ್ಲಿ ಚಿರತೆ ಸೇರಿಕೊಂಡಿದ್ದ ಸಾರ್ವಜನಿಕರಲ್ಲಿ ಮೂಡಿದ್ದ ಭಯವನ್ನು ಸೊಗಡು ಶಿವಣ್ಣ ಅಭಿಮಾನಿಗಳು ದೂರ ಮಾಡುವ ಮೂಲಕ ಅಭಯವನ್ನು ನೀಡಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ 1 ರಂಗಾಪುರದಲ್ಲಿ ರಾಯಗಾಲುವೆಯನ್ನು ಸ್ವಚ್ಛಗೊಳಿಸಲು ಪಾಲಿಕೆ ಹಾಗೂ ಜನಪ್ರತಿನಿಧಿಗಳು ನಿರಾಸಕ್ತಿ ವಹಿಸಿದ್ದರಿಂದ ಗಿಡಗಂಟೆಗಳು ಬೇರೂರಿದ್ದವು.
ಮಳೆಯಿಂದಾಗಿ ನೀರು ಸರಾಗವಾಗಿ ಮುಂದೆ ಹೋಗದೇ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದರು, ಅದರೊಂದಿಗೆ ಗಿಡಗಂಟೆಯಲ್ಲಿ ಸೇರಿಕೊಂಡಿದ್ದ ಚಿರತೆ ಮೇಕೆಗಳನ್ನು ಹೊತ್ತೊಯ್ದರಿಂದ ಭಯ ಭೀತರಾಗಿದ್ದರು.
ರಾಯಗಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೇ ಬಡ ನಿವಾಸಿಗಳ ಮನೆಗೆ ನುಗ್ಗುತ್ತಿದ್ದ ಮಳೆ ನೀರಿನ ವಿಚಾರ ಸೊಗಡು ಶಿವಣ್ಣ ಅಭಿಮಾನಿಗಳ ಗಮನಕ್ಕೆ ಬಂದ ತಕ್ಷಣ, ಜೆಸಿಬಿಗಳ ಮೂಲಕ ರಾಯಗಾಲುವೆಯನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಕಣ್ಣೀರು ಒರೆಸಿದ್ದಾರೆ, ಸೊಗಡು ಅಭಿಮಾನಿಗಳ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.