ಪಾವಗಡ ಮೀಸಲು ಕ್ಷೇತ್ರ ಬದಲಾಯಿಸಿ

ಪಾವಗಡ (PAVAGADA): ಹಲವು ದಶಕಗಳಿಂದ ಪಾವಗಡ ವಿಧಾನಸಭಾ ( constituency) ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಿದ್ದು.ಇತರೆ ತಾಲೂಕುಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಮೀಸಲಾತಿಗಳ ಬದಲಾವಣೆಯಾದರೂ ಪಾವಗಡ ಮೀಸಲು ಬದಲಾಗಿಲ್ಲ, ಮೀಸಲಾತಿ ಬದಲಾಯಿಸುವಂತೆ ಒತ್ತಾಯಿಸಿ ಯುವಕನೋರ್ವ ಪಾದಯಾತ್ರೆ ನಡೆಸಿದ್ದಾನೆ.

ಪಾವಗಡ ವಿಧಾನಸಭಾ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ (general constituency)ಬದಲಾಯಿಸ ಬೇಕೆಂದು  ಕೆ ಎಚ್ ಕುಮಾರ್ ಸೋಮವಾರ ಕೆ ಟಿ ಹಳ್ಳಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದವರ್ಗ, ಸಾಮಾನ್ಯ ವರ್ಗದ ಜನತೆ ತಾಲ್ಲೂಕಿನಲ್ಲಿದ್ದು, ಚುನಾವಣೆ ಆಯೋಗ ಮೀಸಲಾತಿಯನ್ನು ಬದಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೀಸಲಾತಿ ಬದಲಾವಣೆ ಆಗದೇ ಇರುವುದರಿಂದ ಇತರ ಸಮುದಾಯಗಳಿಗೆ ಅಧಿಕಾರ ಸಿಗುತ್ತಿಲ್ಲ,  ಚುನಾವಣೆಯಲ್ಲಿ ಸ್ಪರ್ಧಿಸಲಾಗದೆ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಕ್ಷೇತ್ರಕ್ಕೂ ಪರಿಶಿಷ್ಟ ಜಾತಿ ಮೀಸಲಾತಿಯನ್ನೇ ಮುಂದುವರೆಸಿಕೊಂಡು ಬರಲಾಗುತ್ತಿದೆ. ಚುನಾವಣಾ ಆಯೋಗ ಪರಿಶೀಲನೆ ನಡೆಸಿ ವಿಧಾನಸಭೆ, ಲೋಕಸಭೆ ಕ್ಷೇತ್ರದ ಮೀಸಲಾತಿಯನ್ನು ಬದಲಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದ್ದಾನೆ.

 

Verified by MonsterInsights