ಬೆಂಗಳೂರು: ಜುಲೈ 10ರಿಂದ ಆಗಸ್ಟ್ 9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್ ಆಗಲಿದ್ದು, ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ ದಿನಾಂಕ 10.07.2023 ಸೋಮವಾರದಿಂದ 09.08.2023 ಬುಧವಾರದವರೆಗೆ ಬೆಳಿಗ್ಗೆ 05.00 ಗಂಟೆಯಿಂದ 7.00 ಗಂಟೆವರೆಗೆ ಬೈಯಪ್ಪನಹಳ್ಳಿ ಮತ್ತು ಎಸ್.ವಿ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆಯ ಮೆಟ್ರೋ ರೈಲು ಸೇವೆ ಸ್ಥಗಿತವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ನೇರಳ ಮಾರ್ಗದಲ್ಲಿನ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕವನ್ನು ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಸಂಬಂಧಿತ ಕಾಮಗಾರಿ ಕೈಗೊಳ್ಳುತ್ತಿದ್ದು, ಸದರಿ ಕಾಮಗಾರಿಗಾಗಿ ದಿ.:10.07.2023 ಸೋಮವಾರದಿಂದ 09.08.2023 ಬುಧವಾರದವರೆಗೆ ಬೆಳಿಗೆ 05.00 ಗಂಟೆಯಿಂದ 7.00 ಗಂಟೆವರೆಗೆ ಈ ಕೆಳಗಿನ ನಿಲ್ದಾಣಗಳ ನಡುವೆಯ ಮೆಟ್ರೋ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ.
1. ಬೈಯಪ್ಪನಹಳ್ಳಿ ಮತ್ತು ಎಸ್.ವಿ. ರಸ್ತೆ
2. ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ).
ಆದಾಗ್ಯೂ, ಸ್ವಾಮಿ ವಿವೇಕಾನಂದ ರಸ್ತೆ (ಬೈಯಪ್ಪನಹಳ್ಳಿ ನಿಲ್ದಾಣದ ಮೊದಲು ಒಂದು ನಿಲ್ದಾಣ) ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ರೈಲು ಸೇವೆಗಳು ಬೆಳಗ್ಗೆ 5.00 ಗಂಟೆಯಿಂದ 7.00 ಗಂಟೆಯವರೆಗೆ ಲಭ್ಯವಿರುತ್ತದೆ. ಬೆಳಿಗ್ಗೆ 7.00 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ರೈಲು ಸೇವೆಗಳು ಎಂದಿನಂತೆ ರಾತ್ರಿ 11.00 ಗಂಟೆಯವರೆಗೆ ಲಭ್ಯವಿರುತ್ತವೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪುಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು ಕೋರಿದೆ. ಪುಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸುತ್ತದೆ ಅಂತ ತಿಳಿಸಿದೆ.