ತುಮಕೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೊಗಡು ಶಿವಣ್ಣ ಈ ಬಾರಿ ಎಷ್ಟು ಮತಗಳಿಸಲಿದ್ದಾರೆ ಎಂಬ ವಿಚಾರ ಈಗ ಭರ್ಜರಿ ಬೆಟ್ಟಿಂಗ್ ಗೆ ಕಾರಣವಾಗಿದೆ.
ಹಾಲಿ ಶಾಸಕ ಜ್ಯೋತಿಗಣೇಶ್ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರು 5 ಸಾವಿರ ಮತಗಳನ್ನು ಪಡೆಯೋದಿಲ್ಲ, ಬೆಟ್ಟಿಂಗ್ ಕಟ್ಟುವವರು ಯಾರಾದರೂ ಇದ್ದರೆ ಬನ್ನಿ ಎಂದು ಜ್ಯೋತಿಗಣೇಶ್ ಅವರ ಬೆಂಬಲಿಗರು ಪಂಥಾಹ್ವಾನ ನೀಡುತ್ತಿದ್ದಾರಂತೆ.
ಮಾಜಿ ಸಚಿವ ಸೊಗಡು ಶಿವಣ್ಣ ಮತಗಳಿಕೆ ಮೂರು ಸಾವಿರಕ್ಕೆ ಸೀಮಿತ ಅದಕ್ಕಿಂತ ಜಾಸ್ತಿ ಪಡೆಯೋದಿಲ್ಲ ಎಂದು ಜ್ಯೋತಿಗಣೇಶ್ ಬೆಂಬಲಿಗರು ಛಾಲೆಂಜ್ ಹಾಕುತ್ತಿದ್ದಾರೆ ಎನ್ನಲಾಗಿದೆ.