ಮಧ್ಯರಾತ್ರಿ ಚೆಕ್ ಪೋಸ್ಟ್ ಪರಿಶೀಲಿಸಿದ ಡಿಸಿ ಶುಭಕಲ್ಯಾಣ್

ಡೆಸ್ಕ್
1 Min Read

ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಟಾಧಿಕಾರಿ k v ಅಶೋಕ್ ಅವರು ಶನಿವಾರ ಮಧ್ಯ ರಾತ್ರಿ ತುಮಕೂರು ನಗರ ಹಾಗೂ ಗ್ರಾಮಾಂತರ, ಗುಬ್ಬಿ ಪಟ್ಟಣದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ತುಮಕೂರು ನಗರ ವ್ಯಾಪ್ತಿಯ ಶಿರಾ ಗೇಟ್, ಬಟವಾಡಿ, ಕ್ಯಾತಸಂದ್ರ ಟೋಲ್, ಗೂಳೂರು ಸರ್ಕಲ್, ತುಮಕೂರು ಗ್ರಾಮಾಂತರ ವ್ಯಾಪ್ತಿಯ ಮಲ್ಲಸಂದ್ರ, ಗುಬ್ಬಿ ಪಟ್ಟಣ ಸೇರಿದಂತೆ ವಿವಿಧ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ನಿಯೋಜಿತ ಅಧಿಕಾರಿ ಸಿಬ್ಬಂದಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದರಲ್ಲದೆ ಚೆಕ್ ಪೋಸ್ಟ್ ಮೂಲಕ ಹಾದು ಹೋದ ವಾಹನಗಳನ್ನು ತಪಾಸಣೆ ಮಾಡಿದರು.

Share this Article
Verified by MonsterInsights