ಗೆಲುವಿಗೆ ಅಡ್ಡಿಯಾಗಿದ್ದ ದಿಲೀಪ್ ಕುಮಾರ್
ಗುಬ್ಬಿ (GUBBI) ತಾಲ್ಲೂಕಿನ ರಾಜಕಾರಣ ಜಿಲ್ಲೆಯ ಗಮನ ಸೆಳೆಯುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಟ್ಟಸ್ವಾಮಿ (G.N.BETTASWAY) ಗೆಲುವಿಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಸ್.ಡಿ.ದಿಲೀಪ್ ಕುಮಾರ್ ( S.D.DILLEP KUMAR) ಅಡ್ಡಿಯಾಗಿದ್ದರು, ಈಗ ದಿಲೀಪ್ ಬಿಜೆಪಿ ಅಭ್ಯರ್ಥಿಯಾದರೆ, ಬಿಜೆಪಿಯಲ್ಲಿದ್ದ ಬೆಟ್ಟಸ್ವಾಮಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
2013ರಲ್ಲಿ ಮೊದಲ ಬಾರಿಗೆ ಜೆಡಿಎಸ್ ತೊರೆದು ಕೆಜೆಪಿ ಸೇರಿದ್ದ ಜಿ.ಎನ್.ಬೆಟ್ಟಸ್ವಾಮಿ ಅವರು ಹಾಲಿ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ (S.R.SRINIVAS) ವಿರುದ್ಧ ಬರೋಬ್ಬರಿ 51,539 ಮತಗಳನ್ನು ಪಡೆಯುವ ಮೂಲಕ ಮೊದಲ ಬಾರಿಗೆ ತೀವ್ರ ಸ್ಪರ್ಧೆಯನ್ನು ಜೆಡಿಎಸ್ ಗೆ ನೀಡಿದ್ದರು. ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್ 58,783 ಮತಗಳನ್ನು ಪಡೆದಿದ್ದರು, ಗೆಲುವಿನ ಅಂತರ ಕಡಿಮೆಯಾಗಿತ್ತು.
ಅನುಕಂಪದ ಅಲೆಯಲ್ಲಿ 2018ರಲ್ಲಿ ಬಿಜೆಪಿಯಿಂದ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬೆಟ್ಟಸ್ವಾಮಿ 46491 ಮತಗಳನ್ನ ಪಡೆದರೆ ಬಂಡಾಯ ಅಭ್ಯರ್ಥಿಯಾಗಿದ್ದ ದಿಲೀಪ್ ಕುಮಾರ್ 30528 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆರೆ, ಶಾಸಕರಾಗಿ ಆಯ್ಕೆಯಾಗಿದ್ದ ಎಸ್.ಆರ್.ಶ್ರೀನಿವಾಸ್ 55,572 ಮತಗಳನ್ನು ಪಡೆದಿದ್ದರು.
ದಿಲೀಪ್ ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೇ ಹೋದಿದ್ದರೆ ಹಿಂದುಳಿದ ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿ ಶಾಸಕರಾಗಿ ಆಯ್ಕೆಯಾಗುತ್ತಿದ್ದರು, ಸಿ.ವಿ.ಮಹಾದೇವಯ್ಯ ಅವರ ನಂತರ ಬಿಜೆಪಿಯನ್ನು ಸಮರ್ಥವಾಗಿ ಕಟ್ಟಿದ ಬೆಟ್ಟಸ್ವಾಮಿ ಅವರು ಮೂರನೇ ಬಾರಿ ಸ್ಪರ್ಧಿಸುವ ಉಮೇದಿನಲ್ಲಿದ್ದರು, ಪಕ್ಷ ಟಿಕೆಟ್ ತಪ್ಪಿಸಿ ದಿಲೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಶಾಸಕ ಶ್ರೀನಿವಾಸ್ ಹಾಗೂ ಎಸ್.ಡಿ.ದಿಲೀಪ್ ಕುಮಾರ್ ಇಬ್ಬರು ಸಮಾನ ಶತ್ರುಗಳು ಅವರನ್ನು ಸೋಲಿಸುವುದೇ ಧ್ಯೇಯ ಎಂದಿರುವ ಜಿ.ಎನ್.ಬೆಟ್ಟಸ್ವಾಮಿ ಅವರನ್ನು ಬಂಡಾಯ ಸ್ಪರ್ಧೆಯಿಂದ ಗೆಲುವಿನಿಂದ ದೂರ ಮಾಡಿದ ದಿಲೀಪ್ ಕುಮಾರ್ ಸೋಲಿಸಲು ಪಣ ತೊಟ್ಟಿದ್ದಾರೆ, ಹಿಂದುಳಿದ ವರ್ಗದ ವ್ಯಕ್ತಿಗೆ ಸಹಾಯ ಮಾಡದವರಿಗೆ ನಾನ್ಯಾಕೆ ಸಹಾಯ ಮಾಡಲಿ ಎನ್ನುವ ಭಾವನೆಯಿಂದಲೇ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ ಎನ್ನಲಾಗಿದೆ.