ಬಳ್ಳಾರಿ ಉತ್ಸವ ಅಂಗವಾಗಿ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನಿಂದ ಸೈಕಲ್ ಜಾಥಾ.

ಗಿರೀಶ್
1 Min Read

ಬಳ್ಳಾರಿ ಬಳ್ಳಾರಿ ಉತ್ಸವದ ಅಂಗವಾಗಿ ಬಳ್ಳಾರಿ ವಿಭಾಗದ ಸೈಕಲ್ ಅಸೋಸಿಯೇಷನ್ ವತಿಯಿಂದ ಸೈಕಲ್ ಜಾಥಾ ನಡೆಯಿತು.


ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಟಿಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತರಾದ ಹೇಮಂತ್, ಎಡಿಸಿ ಪಿ.ಎಸ್.ಮಂಜುನಾಥ, ತಹಶೀಲ್ದಾರ ವಿಶ್ವನಾಥ ಮತ್ತು ಭಾರತೀಯ ವೈದ್ಯಕೀಯ ಅಸೋಸಿಯೇಷನ್‍ನ ಮಹಿಳಾ ವಿಭಾಗ ಸೇರಿದಂತೆ ಸೈಕಲ್ ಸವಾರರು ಪೂರ್ವ ವ್ಯಾಯಾಮ ಮಾಡುವುದರ ಮೂಲಕ ಜಾಥಾಗೆ ಹುರಿದುಂಬಿಸಿದರು.
ಜಾಥಾದಲ್ಲಿ ಸುಮಾರು 50 ಕ್ಕೂ ಹೆಚ್ಚು ಸೈಕಲ್ ಸವಾರರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಸೈಕಲ್ ಚಲಾಯಿಸಿದ್ದು ವಿಶೇಷವಾಗಿ ಕಂಡುಬಂತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ರಾಜೇಶ್ವರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಇದ್ದರು.

ಬಳ್ಳಾರಿ ಸೈಕ್ಲಿಂಗ್ ಕ್ಲಬ್ ತಂಡ ಮಾದರಿ:

ಬಳ್ಳಾರಿ ಸೈಕ್ಲಿಂಗ್ ಕ್ಲಬ್ ತಂಡದ ಸದಸ್ಯರ ಸೈಕಲ್ ಜಾಥಾವು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾಗಿ ಮೋತಿ ವೃತ್ತದಿಂದ ಓಪಿಡಿ ಸರ್ಕಲ್ ಮೂಲಕ ಇನ್‍ಫೆಂಟ್ರಿ ರಸ್ತೆ ಮಾರ್ಗವಾಗಿ ಎಸ್.ಪಿ ಸರ್ಕಲ್ ಮೂಲಕ ದುರ್ಗಮ್ಮ ಗುಡಿಯಿಂದ ರಾಯಲ್ ವೃತ್ತದ ಮೂಲಕ ಬೆಂಗಳೂರು ರಸ್ತೆ ತಲುಪಿ, ಬ್ರೂಸ್‍ಪೇಟೆ ಪೊಲೀಸ್ ಠಾಣೆ ಮಾರ್ಗವಾಗಿ ಮೋತಿ ವೃತ್ತದ ಮೂಲಕ ಪುನಃ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.

Share this Article
Verified by MonsterInsights