ಬಿದಿರಾಂಬಿಕೆ ದೇವಾಲಯದಲ್ಲಿ ದಲಿತರ ಮೇಲೆ ಹಲ್ಲೆ

ಡೆಸ್ಕ್
2 Min Read

ಬಿದರೆಗುಡಿಯಲ್ಲಿ ಅಸ್ಪೃಶ್ಯತೆ ಆಚರಣೆ

ತಿಪಟೂರು : ತಾಲ್ಲೂಕಿನ ಪ್ರಸಿದ್ದ ಯಾತ್ರಾಕ್ಷೇತ್ರ ಬಿದರೆಗುಡಿ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ದಲಿತ ಯುವಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ

Contents
ಬಿದರೆಗುಡಿಯಲ್ಲಿ ಅಸ್ಪೃಶ್ಯತೆ ಆಚರಣೆ ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆಯಲ್ಲಿದ್ದು ದೇವಾಲಯದಲ್ಲಿ ಕಳೆದ ನಾಲ್ಕುದಿನಗಳಿಂದ ಜಾತ್ರೆ ನಡೆಯುತ್ತಿದ್ದು ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪೂಜೆಸಲ್ಲಿಸಲು ಹೋದ ದಲಿತರ ಮೇಲೆ ಗಲಾಟೆ ಮಾಡಿದ್ದು ಚಿಕ್ಕಮ್ಮ ದೇವರಿಗೆ ಪೀಠ ಮಾಡಿಸಿರುವ ವಿಚಾರ ಮುಂದಿಟ್ಟು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ – ಲಿಂಗರಾಜು, ಗಾಯಾಳುಶ್ರೀ ಬಿದಿರಾಂಬಿಕ ದೇವಾಲಯಕ್ಕೆ ದಲಿತರ ಪ್ರವೇಶವಿಲ್ಲ ದಲಿತರಿಗೆ ಪ್ರವೇಶ ನೀಡಲು ಬಿದಿರೆಗುಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದಲಿತರು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರು ದೇವಾಲಯದ ಮುಂಭಾಗದಲ್ಲಿ ಕಾಟಾಚಾರಕ್ಕೆ ಅಸ್ಪೃಷ್ಯತೆ ಆಚರಣೆ ಕಾನೂನು ಬಾಹಿರ ಎನ್ನುವ ನಾಮಫಲಕ ಅಳವಡಿಸಲಾಗಿದೆ – ಧನಂಜಯ, ಬಿದಿರೆ ಗುಡಿ ಗ್ರಾಮಸ್ಥರು

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಪ್ರಸಿದ್ದ ಯಾತ್ರಕ್ಷೇತ್ರ 64ಹಳ್ಳಿ ನಾಡದೇವತೆ ಶ್ರೀ ಬಿದಿರಾಂಬಿಕ ದೇವಿ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆ ನಡೆದಿದ್ದು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿದಿರೆಗುಡಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಅರ್ಚಕ ಸುಮಾರು 30ವರ್ಷ ವಯಸ್ಸಿನ ಲಿಂಗರಾಜು ಎಂಬ ಯುವಕನ ಮೇಲೆ ಮಾರಾಣಾಂತಿಕವಾಗಿ ಥಳಿಸಲಾಗಿದೆ.

ಹಲವಾರು ವರ್ಷಗಳಿಂದ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆ ಮಾಡಲಾಗುತ್ತಿದ್ದು ದೇವಾಲಯದಲ್ಲಿ ದಲಿತರಿಗೆ ಪೂಜೆ ನಿರಾಕರಿಸಲಾಗುತ್ತಿದೆ ಎಂದು ಎಸಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಅನೇಕ ದೂರುಗಳನ್ನ ಸಹ ಸ್ಥಳೀಯ ದಲಿತರು ನೀಡಿದರು ಎನ್ನಲಾಗಿದೆ ಆದರೆ ಕಳೆದ ವರ್ಷ ಶ್ರೀಬಿದಿರಮ್ಮ ದೇವಿ ಉತ್ಸವ ಮೂರ್ತಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಬಳಿ ಬಂದಾಗ ಚಿಕ್ಕಮ್ಮ ದೇವಿ ಅರ್ಚಕ ಈಡುಗಾಯಿ ಹಾಕಿದ್ದಾನೆ , ಈಡುಗಾಯಿ ಹಾಕಿದ್ದರಿಂದ ದೇವರಿಗೆ ಮೈಲಿಗೆ ಆಗಿದೆ ಎಂದು ಗಲಾಟೆ ಆಗಿತ್ತು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.

ದೊಡ್ಡಮ್ಮದೇವಿ ಧರ್ಮದರ್ಶಿಗಳಿಗೆ ಮಾಹಿತಿ ನೀಡದೆ ,ಚಿಕ್ಕಮ್ಮ ದೇವರಪೀಠ ಮಾಡಿಸಲಾಗಿದೆ ಎಂದು ಆರೋಪಿಸಿ ಧರ್ಮದರ್ಶಿ ಶಿವಕುಮಾರ್ ಸಮ್ಮುಖದಲ್ಲೆ ಸುಮಾರು 20ಜನರ ಗುಂಪು ಲಿಂಗರಾಜು ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ್ದಾರೆ ಎನ್ನಲಾಗಿದ್ದು ಗಾಯಳು ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೊನ್ನವಳ್ಳಿ ಪೋಲೀಸರು ಹಾಗೂ ತಿಪಟೂರು ಗ್ರಾಮಾಂತರ ವೃತ್ತನಿರೀಕ್ಷಕ ಸಿದ್ದರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆಯಲ್ಲಿದ್ದು ದೇವಾಲಯದಲ್ಲಿ ಕಳೆದ ನಾಲ್ಕುದಿನಗಳಿಂದ ಜಾತ್ರೆ ನಡೆಯುತ್ತಿದ್ದು ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪೂಜೆಸಲ್ಲಿಸಲು ಹೋದ ದಲಿತರ ಮೇಲೆ ಗಲಾಟೆ ಮಾಡಿದ್ದು ಚಿಕ್ಕಮ್ಮ ದೇವರಿಗೆ ಪೀಠ ಮಾಡಿಸಿರುವ ವಿಚಾರ ಮುಂದಿಟ್ಟು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ
– ಲಿಂಗರಾಜು, ಗಾಯಾಳು

ಶ್ರೀ ಬಿದಿರಾಂಬಿಕ ದೇವಾಲಯಕ್ಕೆ ದಲಿತರ ಪ್ರವೇಶವಿಲ್ಲ ದಲಿತರಿಗೆ ಪ್ರವೇಶ ನೀಡಲು ಬಿದಿರೆಗುಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದಲಿತರು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರು ದೇವಾಲಯದ ಮುಂಭಾಗದಲ್ಲಿ ಕಾಟಾಚಾರಕ್ಕೆ ಅಸ್ಪೃಷ್ಯತೆ ಆಚರಣೆ ಕಾನೂನು ಬಾಹಿರ ಎನ್ನುವ ನಾಮಫಲಕ ಅಳವಡಿಸಲಾಗಿದೆ
– ಧನಂಜಯ, ಬಿದಿರೆ ಗುಡಿ ಗ್ರಾಮಸ್ಥರು

Share this Article
Verified by MonsterInsights