ವಿಧಾನಸಭಾ ಚುನಾವಣೆ-2023: ಅಂತಿಮ ಕಣದಲ್ಲಿರುವ ಉಮೇದುವಾರರ ವಿವರ

ಡೆಸ್ಕ್
5 Min Read

ತುಮಕೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಏಪ್ರಿಲ್ 24ರಂದು 23 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, 131 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ.

128-ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ.ಎಸ್.ಕಿರಣ್ ಕುಮಾರ್, ಆಮ್ ಆದ್ಮಿ ಪಕ್ಷದ ನಿಂಗರಾಜು ಎಸ್.ಸಿ., ಭಾರತೀಯ ಜನತಾ ಪಕ್ಷದ ಜೆ.ಸಿ.ಮಾಧುಸ್ವಾಮಿ, ಜನತಾದಳ(ಜಾತ್ಯಾತೀತ) ಪಕ್ಷದ ಸಿ.ಬಿ.ಸುರೇಶ್ ಬಾಬು, ಉತ್ತಮ ಪ್ರಜಾಕೀಯ ಪಕ್ಷದ ಜಯರಾಮ್ ಹೆಚ್.ಆರ್., ಭಾರತೀಯ ಬಹುಜನ ಕ್ರಾಂತಿ ದಳದ ಹೆಚ್.ಟಿ.ನಾಗರಾಜು, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಕ್ಷದ ಎಂ.ಕೆ.ಪಾಷ, ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನಯ್ಯ ಬಿ.ಎಸ್., ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯ್ಕ ಎಂ.ಬಿ., ಪಕ್ಷೇತರರಾದ ಕ್ಯಾಪ್ಟನ್ ಸೋಮಶೇಖರ್, ಗಂಗಾಧರಯ್ಯ, ಗಿರೀಶ್ ಆರ್., ನಾಸೀರ್ ಬೇಗ್ ಎಂ. ಸೇರಿದಂತೆ 13 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

129-ತಿಪಟೂರು ವಿಧಾನಸಭಾ ಕ್ಷೇತ್ರ: ಆಮ್ ಆದ್ಮಿ ಪಕ್ಷದ ಟಿ.ಎಸ್. ಚಂದ್ರಶೇಖರ್, ಭಾರತೀಯ ಜನತಾ ಪಕ್ಷದ ಬಿ.ಸಿ. ನಾಗೇಶ್, ಜನತಾದಳ(ಜಾತ್ಯತೀತ) ಪಕ್ಷದ ಕೆ.ಟಿ. ಶಾಂತಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ, ಕನ್ನಡ ದೇಶದ ಪಕ್ಷದ ಅರುಣ್ ಲಿಂಗ, ಉತ್ತಮ ಪ್ರಜಾಕೀಯ ಪಕ್ಷದ ಗಿರೀಶ ಎಸ್.ಬಿ., ಕರ್ನಾಟಕ ರಾಷ್ಟ್ರ ಸಮಿತಿಯ ಗಂಗಾಧರಯ್ಯ ಕೆ.ಎಸ್., ಭಾರತೀಯ ಬಹುಜನ ಕ್ರಾಂತಿ ದಳದ ಆರ್.ಎಂ. ಮಲ್ಲಿಕಾರ್ಜುನಸ್ವಾಮಿ, ಪಕ್ಷೇತರರಾದ ಅನಂತಶಯನ ಎ.ಟಿ., ಟಿ.ಎನ್. ಕುಮಾರಸ್ವಾಮಿ, ಬಂಡೆ ರವಿ, ಬಿ.ಎನ್. ವಿಜಯಕುಮಾರ್, ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

130-ತುರುವೇಕೆರೆ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾಂತರಾಜ್ ಬಿ.ಎಂ., ಜನತಾದಳ(ಜಾತ್ಯತೀತ) ಪಕ್ಷದ ಎಂ.ಟಿ.ಕೃಷ್ಣಪ್ಪ, ಭಾರತೀಯ ಜನತಾ ಪಕ್ಷದ ಮಸಾಲ ಜಯರಾಮ್, ಆಮ್ ಆದ್ಮಿ ಪಕ್ಷದ ಜಯರಾಮ್ ಜಿ.ಸಿ., ಬಹುಜನ ಸಮಾಜ ಪಕ್ಷದ ಶ್ರೀನಿವಾಸ ಎಂ.ಸಿ., ಭಾರತೀಯ ಬಹುಜನ ಕ್ರಾಂತಿ ದಳದ ಹೆಚ್.ಬಿ.ಪುಟ್ಟಪ್ಪ, ಉತ್ತಮ ಪ್ರಜಾಕೀಯ ಪಕ್ಷದ ಭರತ್ ಎಸ್., ಕರ್ನಾಟಕ ರಾಷ್ಟ್ರ ಸಮಿತಿಯ ರಾಮ್ ಪ್ರಸಾದ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ ಪಕ್ಷದ ಹಟ್ಟಯ್ಯ ಎನ್., ಪಕ್ಷೇತರರಾದ ಕಪನಿಗೌಡ, ನಾರಾಯಣ, ಸೇರಿದಂತೆ 11 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

131-ಕುಣಿಗಲ್ ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಡಿ.ಕೃಷ್ಣಕುಮಾರ್, ಆಮ್ ಆದ್ಮಿ ಪಕ್ಷದ ಹೆಚ್.ಎ.ಜಯರಾಮಯ್ಯ, ಜನತಾದಳ(ಜಾತ್ಯತೀತ) ಪಕ್ಷದ ಡಾ: ರವಿ ಬಿ.ಎನ್., ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಂಗನಾಥ್ ಹೆಚ್.ಡಿ., ಕರ್ನಾಟಕ ರಾಷ್ಟ್ರೀಯ ಸಮಿತಿಯ ರಘು ಜೆ.ಎಸ್., ರಾಷ್ಟ್ರೀಯ ಜನಹಿತ ಪಕ್ಷದ ರಮೇಶ್ ಎಸ್.ಬಿ., ಸ್ವತಂತ್ರ ಅಭ್ಯರ್ಥಿಗಳಾದ ಬಿ.ಟಿ.ತಿರುಮಲೇಗೌಡ, ಬಿ.ಬಿ.ರಾಮಸ್ವಾಮಿಗೌಡ, ಸೇರಿದಂತೆ 8 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

132-ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅಹ್ಮದ್, ಜನತಾದಳ(ಜಾತ್ಯತೀತ) ಪಕ್ಷದ ಎನ್. ಗೋವಿಂದರಾಜು, ಭಾರತೀಯ ಜನತಾ ಪಕ್ಷದ ಜಿ.ಬಿ.ಜ್ಯೋತಿಗಣೇಶ್, ಬಹುಜನ ಸಮಾಜ ಪಕ್ಷದ ಕೆ.ಬಿ.ದಿನೇಶ್ ಬಾಬು, ಆಮ್ ಆದ್ಮಿ ಪಕ್ಷದ ಮೊಹಮ್ಮದ್ ಗೌಸ್ ಪೀರ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎಂ.ವಿ.ಕಲ್ಯಾಣಿ, ಕರ್ನಾಟಕ ರಾಷ್ಟ್ರ ಸಮಿತಿಯ ಗಜೇಂದ್ರ ಕುಮಾರ್ ಗೌಡ, ಉತ್ತಮ ಪ್ರಜಾಕೀಯ ಪಕ್ಷದ ಟಿ.ಎನ್.ರಾಜೇಶ್, ಪಕ್ಷೇತರರಾದ ಕುಮಾರ್ ಎಸ್., ದಾದಾಪೀರ್, ನರಸೇಗೌಡ, ಪ್ರಕಾಶ್ ಆರ್.ಎ.ಜೈನ್, ವೀರೇಶ ಪ್ರಸಾದ್ ಆರ್., ಎಸ್. ಶಿವಣ್ಣ, ಸೇರಿದಂತೆ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ: ಜನತಾದಳ(ಜಾತ್ಯತೀತ) ಪಕ್ಷದ ಡಿ.ಸಿ.ಗೌರಿಶಂಕರ್ ಸ್ವಾಮಿ, ಆಮ್ ಆದ್ಮಿ ಪಕ್ಷದ ದಿನೇಶ್ ಕುಮಾರ್ ಬಿ., ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿ.ಎಚ್.ಷಣ್ಮುಖಪ್ಪ, ಭಾರತೀಯ ಜನತಾ ಪಕ್ಷದ ಬಿ.ಸುರೇಶ್ ಗೌಡ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವಿ.ಎ.ಆನಂದ್, ಸೋಶಿಯಾಲಿಸ್ಟ್ ಪಾರ್ಟಿ(ಇಂಡಿಯಾ)ಯ ಡಿ.ಗೋಪಾಲಕ್ರಿಷ್ಣ, ಉತ್ತಮ ಪ್ರಜಾಕೀಯ ಪಕ್ಷದ ದಿನೇಶ್ ಟಿ.ಎನ್., ಇಂಡಿಯನ್ ಮೂವ್‌ಮೆಂಟ್ ಪಕ್ಷದ ನಿಸ್ಸಾರ ಅಹಮ್ಮದ್, ಪಕ್ಷೇತರರಾದ ಅಶೋಕ ಕೆ.ಎಸ್., ಎಸ್.ಟಿ. ಗೋವಿಂದಯ್ಯ, ಯೋಗನರಸಿಂಹ ಮೂರ್ತಿ ಟಿ.ಹೆಚ್. ಕೆ.ವಿ.ಶ್ರೀನಿವಾಸ್ ಕಲ್ಕೆರೆ, ಸಿದ್ಧರಾಮೇಗೌಡ ಸೇರಿದಂತೆ 13 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

134-ಕೊರಟಗೆರೆ ವಿಧಾನಸಭಾ ಕ್ಷೇತ್ರ: ಜನತಾದಳ(ಜಾತ್ಯಾತೀತ) ಪಕ್ಷದ ಪಿ.ಆರ್.ಸುಧಾಕರ್‌ಲಾಲ್, ಭಾರತೀಯ ಜನತಾ ಪಕ್ಷದ ಬಿ.ಹೆಚ್. ಅನಿಲ್ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ: ಜಿ.ಪರಮೇಶ್ವರ, ಆಮ್ ಆದ್ಮಿ ಪಕ್ಷದ ಡಿ.ಹನುಮಂತರಾಯಪ್ಪ, ಬಹುಜನ ಸಮಾಜ ಪಕ್ಷದ ಎಸ್.ಜಿ. ಮಂಜುನಾಥ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕುಮಾರ್ ಕೆ.ಸಿ., ಉತ್ತಮ ಪ್ರಜಾಕೀಯ ಪಕ್ಷದ ನಾಗೇಂದ್ರ ಟಿ.ಎನ್., ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಯ್ಯ ಎನ್., ಪಕ್ಷೇತರರಾದ ಮುನಿಯಪ್ಪ ಕೆ.ಎಂ., ಬಿ.ಎನ್. ವಿಜಯಲಕ್ಷಿö್ಮ, ವಿ.ಶಾಂತಕುಮಾರ್, ಹನುಮಂತರಾಯಪ್ಪ, ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

135-ಗುಬ್ಬಿ ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಪಕ್ಷದ ನಾಗರಾಜು ಬಿ.ಎಸ್., ಆಮ್ ಆದ್ಮಿ ಪಕ್ಷದ ಪ್ರಭು ಸ್ವಾಮಿ ಬಿ.ಎಸ್., ಬಹುಜನ ಸಮಾಜ ಪಕ್ಷದ ಶಿವಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಸ್.ಆರ್.ಶ್ರೀನಿವಾಸ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರವೀಣಗೌಡ ಚೇಳೂರು., ಪಕ್ಷೇತರರಾದ ಹೆಚ್.ಹೆಚ್.ಗಿರಿಯಪ್ಪ, ಡಾ: ಭಾವನಾ ಆರ್. ಗಿರಿಧರ್, ವೀರೇಶ್ ಪ್ರಸಾದ್ ಆರ್., ಟಿ.ವಿ. ಶ್ರೀನಿವಾಸ್ ಸೇರಿದಂತೆ 10 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

136-ಶಿರಾ ವಿಧಾನಸಭಾ ಕ್ಷೇತ್ರ: ಜನತಾದಳ(ಜಾತ್ಯಾತೀತ) ಪಕ್ಷದ ಆರ್.ಉಗ್ರೇಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ, ಬಹುಜನ ಸಮಾಜ ಪಕ್ಷದ ನಟರಾಜು ಎನ್.ಕೆ., ಭಾರತೀಯ ಜನತಾ ಪಕ್ಷದ ಸಿ.ಎಂ.ರಾಜೇಶ್ ಗೌಡ, ಆಮ್ ಆದ್ಮಿ ಪಕ್ಷದ ಶಶಿಕುಮಾರ್ ಆರ್., ಉತ್ತಮ ಪ್ರಜಾಕೀಯ ಪಕ್ಷದ ಅಶೋಕ, ಡಾ: ಅಂಬೇಡ್ಕರ್ ಪೀಪಲ್ಸ್ ಪಕ್ಷದ ಎನ್.ಕುಮಾರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಗಿರೀಶ್, ಸ್ವಯಂ ಕೃಷಿ ಪಕ್ಷದ ಕೆ.ಟಿ.ಗುಂಡರಾಜ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರದೀಪ್ ಕುಮಾರ್, ಸ್ವತಂತ್ರ ಅಭ್ಯರ್ಥಿಗಳಾದ ಎಸ್.ಎನ್.ಕಾಂತರಾಜು, ಬಂಡಿ ರಂಗನಾಥ ವೈ.ಆರ್., ಬಿ.ಎ.ಮಂಜುನಾಥ, ರಂಗನಾಥ, ರಂಗನಾಥಯ್ಯ ವೈ.ಜಿ., ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

137-ಪಾವಗಡ ವಿಧಾನಸಭಾ ಕ್ಷೇತ್ರ: ಆಮ್ ಆದ್ಮಿ ಪಕ್ಷದ ಎನ್.ರಾಮಾಂಜಿನಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ವಿ.ವೆಂಕಟೇಶ್, ಜನತಾದಳ(ಜಾತ್ಯಾತೀತ) ಪಕ್ಷದ ಕೆ.ಎಂ.ತಿಮ್ಮರಾಯಪ್ಪ, ಭಾರತೀಯ ಜನತಾ ಪಕ್ಷದ ಕೃಷ್ಣನಾಯಕ, ಬಹುಜನ ಸಮಾಜ ಪಕ್ಷದ ಟಿ. ಹನುಮಂತರಾಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಗೇಂದ್ರ ಕುಮಾರ್, ಭಾರತೀಯ ಬಹುಜನ ಕ್ರಾಂತಿ ದಳದ ಬಿ.ಟಿ. ರಾಮಸುಬ್ಬಯ್ಯ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್., ಪಕ್ಷೇತರರಾದ ಗೋವಿಂದಪ್ಪ ವಿ., ಶ್ರೀನಿವಾಸ ಎಸ್.ಎಚ್., ನಾಗರಾಜಪ್ಪ, ಸೇರಿದಂತೆ 11 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

138-ಮಧುಗಿರಿ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕ್ಯಾತ್ಸಂದ್ರ ಎನ್.ರಾಜಣ್ಣ, ಭಾರತೀಯ ಜನತಾ ಪಕ್ಷದ ಎಲ್.ಸಿ.ನಾಗರಾಜ, ಬಹುಜನ ಸಮಾಜ ಪಕ್ಷದ ಎನ್. ಮಧು, ಜನತಾದಳ(ಜಾತ್ಯಾತೀತ) ಪಕ್ಷದ ಎಂ.ವಿ.ವೀರಭದ್ರಯ್ಯ, ಆಮ್ ಆದ್ಮಿ ಪಕ್ಷದ ಸೈಯದ್ ಮುಜಾಮಿಲ್ ಪಾಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್. ಜಯಂತ್, ಉತ್ತಮ ಪ್ರಜಾಕೀಯ ಪಕ್ಷದ ಮುದ್ದುರಾಜು ಜಿ. ಪ್ರಜಾಕೀಯ, ಲೋಕಶಕ್ತಿ ಪಕ್ಷದ ರಂಗನಾಥ ಆರ್.ಎಸ್., ಜೈ ಮಹಾಭಾರತ್ ಪಕ್ಷದ ವೆಂಕಟೇಶ, ಪಕ್ಷೇತರರಾದ ಧನುಷ್ ಕುಮಾರ್ ಬಿ.ಕೆ., ಜಿ.ಹೆಚ್.ಮಾರುತಿ, ಲಕ್ಷ್ಮೀ ನಾರಾಯಣಪ್ಪ ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಒಟ್ಟು 258 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಪುರುಷ ಅಭ್ಯರ್ಥಿಗಳು 251 ಮಹಿಳಾ ಅಭ್ಯರ್ಥಿಗಳು 7 ಮಂದಿ ಸಲ್ಲಿಸಿರುತ್ತಾರೆ.

ಅಂತಿಮವಾಗಿ ಏಪ್ರಿಲ್ 24ರಂದು 23 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಒಟ್ಟು 128 ಪುರುಷ ಹಾಗೂ 3 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 131 ಮಂದಿ ಕಣದಲ್ಲಿದ್ದಾರೆ.

ಬಿಜೆಪಿ ಪಕ್ಷದಿಂದ 11 ಕ್ಷೇತ್ರ, ಕಾಂಗ್ರೆಸ್ ಪಕ್ಷದಿಂದ 11 ಕ್ಷೇತ್ರ, ಎಎಪಿ ಪಕ್ಷದಿಂದ 11 ಕ್ಷೇತ್ರ, ಬಿಎಸ್‌ಪಿ ಪಕ್ಷದಿಂದ 7 ಕ್ಷೇತ್ರ, ಜೆಡಿಎಸ್ ಪಕ್ಷದಿಂದ 11 ಕ್ಷೇತ್ರ, ನೋಂದಾಯಿತ ಮಾನ್ಯತೆ ಇಲ್ಲದ ಪಕ್ಷದವರಿಂದ 38 ಕ್ಷೇತ್ರ ಹಾಗೂ ಸ್ವತಂತ್ರ ಅಭ್ಯರ್ಥಿಗಳು 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುತ್ತಾರೆ.

TAGGED: ,
Share this Article
Verified by MonsterInsights