ತುಮಕೂರು: ಜನಸೇವೆ ಮಾಡಿಸಲು ಜನರಿಂದ ಆಯ್ಕೆಯಾಗಿದ್ದ ಜನಪ್ರತಿನಿಧಿಗಳೇ ಇಸ್ಪೀಟ್ ಆಡಿಸಲು ಹೋಗಿ ಬಂಧನಕ್ಕೆ ಒಳಗಾಗಿರುವ ಘಟನೆ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ತುಮಕೂರು ತಾಲ್ಲೂಕು ಓಬಳಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿರುವ ವಿ.ಡಿ.ರಾಜಣ್ಣ, ಕುಮಾರ್ ಬಂಧನಕ್ಕೆ ಒಳಗಾಗಿರುವ ಗ್ರಾ.ಪಂ.ಸದಸ್ಯರು.
ತಡರಾತ್ರಿ ಚಿಕ್ಕಕೊಡತಕಲ್ಲು ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಪಿಎಸ್ಐ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾ.ಪಂ.ಸದಸ್ಯರು ಕಾನೂನು ಬಾಹಿರ ಚಟುವಟಿಕೆಯ ನೇತೃತ್ವವಹಿಸಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.