ಹೆಂಡತಿಯನ್ನು ಕೊಂದ ಪತಿಯ ಬಂಧನ

ಡೆಸ್ಕ್
1 Min Read

ತುಮಕೂರು: ತವರು ಮನೆಗೆ ಹೋಗಿ ಬರುವ ವಿಚಾರಕ್ಕೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಚಂದ್ರಶೇಖರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಬ್ಬಿ ತಾಲ್ಲೂಕು ಮಂಚಿಹಳ್ಳಿಯ ಈಶ್ವರಯ್ಯ ಬಂಧಿತ ಆರೋಪಿ, ಕಳೆದ ವರ್ಷ ಜನವರಿ 30-1-2022ರಂದು ಬೆಳಿಗ್ಗೆ ಹೆಂಡತಿ ವಸಂತಮ್ಮ ತವರು ಮನೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಡಿದ್ದು, ಈ ವೇಳೆ ಕುತ್ತಿಗೆ ಮಚ್ಚು ಬೀಸಿದ್ದ, ತೀವ್ರವಾಗಿ ರಕ್ತಸ್ರಾವವಾಗಿದ್ದ ವಸಂತಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಹೆಂಡತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಈಶ್ವರಯ್ಯ ಸಿಟ್ಟಿನಲ್ಲೇ ಬೈಕ್ ನೊಂದಿಗೆ ಪರಾರಿಯಾಗಿದ್ದ, ಪ್ರಕರಣ ದಾಖಲಿಸಿಕೊಂಡಿದ್ದ ಚಂದ್ರಶೇಖರಪುರ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು.

ಕಳೆದ ಒಂದೂವರೆ ವರ್ಷದಿಂದ ವಸಂತನರಾಸಪುರ ಕೈಗಾರಿಕಾ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಈಶ್ವರಯ್ಯ, ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸಿಪಿಐ ಗೋಪಿನಾಥ್ ಮಾರ್ಗದರ್ಶನದಲ್ಲಿ ಪಿಎಸ್ ಐ ಶಿವಕುಮಾರ್ , ಎಎಸ್ಐ ರಾಮಚಂದ್ರಪ್ಪ, ಪೇದೆಗಳಾದ ಮಧುಸೂದನ್, ಮೊಹಮ್ಮದ್ ಖಲಂದರ್ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

Share this Article
Verified by MonsterInsights