ಯಾರ್ಯಾರೋ ಬರ್ತಾರೆ ಅಭ್ಯರ್ಥಿ ಅಂತಾರೆ: ಚಂದ್ರಶೇಖರ ಗೌಡ

ಡೆಸ್ಕ್
1 Min Read

ತುಮಕೂರು: ಯಾರೋ ಬರ್ತಾರೆ, ನಾನೇ ಅಭ್ಯರ್ಥಿ ಅನ್ನುತ್ತಾರೆ, ಮೆಂಬರ್ ಶಿಪ್ ಇಲ್ಲದವನ ಜೊತೆ ನಮ್ಮವರು ಜೊತೆ ಸೇರಿಕೊಳ್ಳುತ್ತಾರೆ ಇಂತವರಿಗೆ ಏನು ಹೇಳ್ಬೇಕೋ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸದ್ಭಾವನ ದಿನದಲ್ಲಿ ಮಾತನಾಡಿದ ಅವರು, 128 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಬೆಳವಣಿಗೆಗಳು ಸರಿಯಲ್ಲ, ಮುಖಂಡರುಗಳು ಮಾಧ್ಯಮಗಳ ಮುಂದೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಏನೇ ಭಿನ್ನಾಭಿಪ್ರಾಯಗಳಿದ್ದರು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೆಂದು ಸಲಹೆ ನೀಡಿದರು.

ನಗರ ವಿಧಾನಸಭಾ ಕ್ಷೇತ್ರದಲ್ಲಿ ಗೊಂದಲಗಳು ಹೆಚ್ಚುತ್ತಿವೆ, ಯಾರೋ ಬರ್ತಾರೆ, ನಾನೇ ಅಭ್ಯರ್ಥಿ ಎನ್ನುತ್ತಾರೆ ಅಂತವರ ಜೊತೆ ನಮ್ಮವರು ಹೋಗುತ್ತಾರೆ ಎಂದು ಅಟಿಕಾ ಬಾಬು ವಿರುದ್ಧ ಹರಿಹಾಯ್ದರು.ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದರೆ ಕಾಂಗ್ರೆಸ್ 11ಕ್ಕೆ 11 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಬಹುದು ಎಂದರು.

Share this Article
Verified by MonsterInsights