ದೇವರಾಜ ಅರಸು ಜಯಂತಿಯಲ್ಲಿ ನಾಡಗೀತೆಗೆ ಅವಮಾನ

ಡೆಸ್ಕ್
1 Min Read

ತುಮಕೂರು: ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ದಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಾಗಡೀತೆಗೆ ಅವಮಾನಿಸಲಾಗಿದ್ದು, ಸರ್ಕಾರ ನಿಗದಿ ಪಡಿಸಿರುವ ಧಾಟಿ ಮತ್ತು ರಾಗವನ್ನು ಬಿಟ್ಟು ನಾಡಗೀತೆಯನ್ನು ಹಾಡಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಸರ್ಕಾರಿ  ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶಕ್ಕೆ ತಿಲಾಂಜಲಿಯನ್ನು ಇಡಲಾಗಿದೆ. ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರು ಸಂಯೋಜನೆ ಮಾಡಿರುವಂತೆ ಹಾಡಬೇಕು, 2.30 ನಿಮಿಷದಲ್ಲಿ ಪೂರ್ಣಗೊಳಿಸಬೇಕೆಂದು ಕಳೆದ ವರ್ಷವೇ ಅಂತಿಮಗೊಳಿಸಿ ಆದೇಶವನ್ನು ಹೊರಡಿಸಿತ್ತು.

ಆದರೆ ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಹಾಡಿದವರು ಸರ್ಕಾರದ ನಿಯಮದಂತೆ ಹಾಡದೇ ನಾಡಗೀತೆಗೆ ಅಗೌರವ ತೋರಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Article
Verified by MonsterInsights