ಲಾಕಪ್ ನಿಂದ ಕಳ್ಳತನ ಆರೋಪಿ ಪರಾರಿ: ಅಧಿಕಾರಿ, ಸಿಬ್ಬಂದಿ ತಲೆದಂಡ?

ಡೆಸ್ಕ್
1 Min Read

ತುಮಕೂರು: ಕಳ್ಳತನ ಪ್ರಕರಣದ ಆರೋಪಿ ಲಾಕಪ್ ನಿಂದ ತಡರಾತ್ರಿ ಪರಾರಿಯಾಗಿರುವ ಘಟನೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕಳ್ಳತನ, ಡಕಾಯತಿ ಪ್ರಕರಣದಲ್ಲಿ ಗದಗ ಮೂಲದ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್‌ ನದಾಫ್‌ ಎನ್ನುವವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆಗಾಗಿ ಗುಬ್ಬಿ ಪೋಲಿಸ್ ಠಾಣೆಯ ಸಬ್ ಇನ್ಸೆಕ್ಟರ್ ದೇವಿಕಾ ದೇವಿ ವಶಕ್ಕೆ ಪಡೆದಿದ್ದರು.

ಪೊಲೀಸ್ ತನಿಖೆಗಾಗಿ ಲಾಕಪ್ ನಲ್ಲಿದ್ದ ಆರೋಪಿ ಬಾಳಾ ಸಾಹೇಬ್ ಫೆಬ್ರವರಿ 1 ರ ತಡರಾತ್ರಿ ಲಾಕಪ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ, ತಪ್ಪಿಸಿಕೊಂಡ ಆರೋಪಿ ಪತ್ತೆಗಾಗಿ ಪೋಲೀಸರು ಹರಸಾಹಸ ಪಡುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಹೋಬಳಿ ಹುಲ್ಲೂರು ಗ್ರಾಮದ ವಾಸಿಯಾದ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ @ ಹರ್ಷವರ್ಧನ 25 ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದು ಕಳ್ಳತನ ಡಕಾಯಿತಿ ಹೀಗೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದನು.

ಗುಬ್ಬಿ ಪೋಲಿಸ್ ಠಾಣೆಯ ಮೊಕದ್ದಮೆ ಸಂಖ್ಯೆ 13/2024ರ ಪ್ರಕರಣ ಆರೋಪಿಯಾಗಿದ್ದ ಇತನನ್ನು ವಿಚಾರಣೆಗಾಗಿ ಪಿಎಸ್‌ಐ ದೇವಿಕಾದೇವಿರವರು ತಮ್ಮ ವಶಕ್ಕೆ ಪಡೆದು ತನಿಖೆ ನೆಡೆಸುತ್ತಿದ್ದರು.

ಲಾಕಪ್ ನಿಂದ ಆರೋಪಿ ಪರಾರಿಯಾಗಿರುವ ವಿಚಾರ ತಿಳಿಯುತ್ತಲೇ ಎಸ್ಪಿ ಅಶೋಕ್ ವೆಂಕಟ್ ಸೇರಿದಂತೆ ಉನ್ನತ ಅಧಿಕಾರಿ ಗುಬ್ಬಿ ಠಾಣೆಗೆ ಭೇಟಿ ನೀಡಿದ್ದು, ಬೇಜವ್ದಾರಿ ತೋರಿದ ಅಧಿಕಾರಿ ಹಾಗೂ ಸಿಬ್ಬಂದಿ ತಲೆದಂಡವಾಗಲಿದೆಯೇ? ಕಾದು ನೋಡಬೇಕಿದೆ.

Share this Article
Verified by MonsterInsights