ತುಮಕೂರು: ಲಾರಿ ಮತ್ತು ಬೈಕ್ ಅಪಘಾತದಲ್ಲಿ ಖಾಸಗಿ ಕಾರ್ಖಾನೆ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ತುಮಕೂರು ಹೊರವಲಯದ ಗೂಳೂರಿನಲ್ಲಿ ನಡೆದಿದೆ.
ಹೆಬ್ಬೂರು ಹೋಬಳಿ ಕಾಳಿಂಗಯ್ಯನ ಪಾಳ್ಯದ ಯೋಗೀಶ್ (34) ವರ್ಷ ಸಾವನ್ನಪ್ಪಿದ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಮೃತ ಯೋಗೀಶ್ ಅಂತರಸನಹಳ್ಳಿಯ ವಿಪ್ರೋ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮಾರ್ನಿಂಗ್ ಶಿಫ್ಟ್ ನಲ್ಲಿ ಕೆಲಸ ಮಾಡಲು ಬೆಳಿಗ್ಗೆ ಮನೆಯಿಂದ ಹೊರಟಿದ್ದ, ಗೂಳೂರಿನ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಲಾಗಿದೆ.