ತುಮಕೂರು: ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಅಪಘಾತದಿಂದ 359 ಮಂದಿ ಸಾವನ್ನಪ್ಪಿದ್ದು, 7 ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ತುಮಕೂರು ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ ಆರು ತಿಂಗಳಲ್ಲಿ 1,201 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮಾರಾಣಾಂತಿಕ ಅಪಘಾತ 337, ಮಾರಾಣಾಂತಿಕವಲ್ಲದ ಅಪಘಾತ 864ಗಳಲ್ಲಿ 359 ಮಂದಿ ಸಾವನ್ನಪ್ಪಿದ್ದು, 43 ಮಹಿಳೆಯರು, 7 ಮಕ್ಕಳು ಸಾವನ್ನಪ್ಪಿದ್ದು, 309 ಪುರುಷರ ಕುಟುಂಬಗಳು ಆಧಾರಸ್ತಂಭವನ್ನು ಕಳೆದುಕೊಂಡಿದ್ದಾರೆ. 1321 ಗಾಯಾಳುಗಳಲ್ಲಿ 86 ಮಕ್ಕಳು, 262 ಮಹಿಳೆಯರು ಇದ್ದಾರೆ.