ತುಮಕೂರು: ಹೃದಯಾಘಾತದಿಂದ ರಸ್ತೆ ಮಧ್ಯೆದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಗಟ್ಲಹೊಸಹಳ್ಳಿ ಗ್ರಾಮದ ಸ್ವಾಮಿ ಮೃತ ಯುವಕ. ಚಿತ್ರದುರ್ಗ ಮೂಲದ ಸ್ವಾಮಿ ಹೃದಯಾಘಾತದಿಂದ ನಗರದ ಕೋಡಿ ಬಸವಣ್ಣ ದೇಗುಲದ ಬಳಿಯ ಡಿವೈಡೆರ್ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ರಸ್ತೆ ಮಧ್ಯದಲ್ಲಿ ಯುವಕ ಮೃತದೇಹವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತುಮಕೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.