ನಾಯಿ ಮೈ ತೊಳೆಯಲು ಹೋಗಿ ಯುವಕ ಸಾವು

ಡೆಸ್ಕ್
0 Min Read

ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾ ಪಂ ವ್ಯಾಪ್ತಿಯ ಬೈರೇನಹಳ್ಳಿ ಹೊಸಕೆರೆಯಲ್ಲಿ ಗೌರಿಬಿದನೂರು ಮೂಲದ ಯುವಕ ಸಾವನ್ನಪ್ಪಿದ್ದಾನೆ.

ಗೌರಿಬಿದನೂರು ತಾಲ್ಲೂಕಿನ ಖಾದಲವೇಣಿ ಗ್ರಾಮದ ಯುವಕ ವಿನೋದ್ ರಾಜ್ ತನ್ನ ಸ್ನೇಹಿತನ ತೋಟದಮನೆಗೆ ಬಂದು ವಿಹಾರಿಸಿ ನಾಯಿಗೆ ಮೈ ತೊಳೆಯಲು ಹೋದ ಸಂಧರ್ಭದಲ್ಲಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Share this Article
Verified by MonsterInsights