ಅಪರಿಚಿತನ ದುಬಾರಿ ಗಿಫ್ಟ್ ಗೆ 10 ಲಕ್ಷ ಕಳೆದುಕೊಂಡ ಮಹಿಳೆ..!!

ಡೆಸ್ಕ್
1 Min Read
ಸಾಂಧರ್ಭಿಕ ಚಿತ್ರ

ಫೇಸ್ ಬುಕ್ ನಲ್ಲಿ ಪರಿಚಿತನಾದ ಅಪರಿಚಿತ ಕಳುಹಿಸಿದ ಗಿಫ್ಟ್ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್ ಬುಕ್ ನಲ್ಲಿ ಪರಿಚಿತವಾದ ಅಪರಿಚಿತ ವ್ಯಕ್ತಿ ವಾಟ್ಸಾಪ್ ಮೂಲಕ ಮೇಸೆಜ್ ಮಾಡುತ್ತಿದ್ದು, ಅದಕ್ಕೆ ಸ್ಪಂದಿಸಿದ ತುಮಕೂರಿನ ಮಹಿಳೆಗೆ ದುಬಾರಿ ಬೆಲೆ ಗಿಫ್ಟ್ ಕೊರಿಯರ್ ಮಾಡಿರುವುದಾಗಿ, ಕೊರಿಯರ್ ನ ಮುದ್ರಣ ಪ್ರತಿಯನ್ನು ಕಳುಹಿಸಿದ್ದಾನೆ.

ಸಾಂಧರ್ಭಿಕ ಚಿತ್ರ

ಅಪರಿಚಿತ ನೀಡಿದ ದುಬಾರಿ ಗಿಫ್ಟ್ ಪಡೆದುಕೊಳ್ಳಲು ಕಸ್ಟಮ್ ಅಧಿಕಾರಿಗಳೊಂದಿಗೆ ಸಂಪರ್ಕ ಪಡೆಯಲು ಹೇಳಿದ್ದಾನೆ, ಅದರಂತೆ ಮಹಿಳೆಯ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮಗೆ ಬಂದಿರುವ ಗಿಫ್ಟ್ ಪಡೆಯಲು ಕಸ್ಟಮ್ ಹಣವನ್ನು ಕಟ್ಟುವಂತೆ ಹೇಳಿದ್ದಾರೆ. ದುಬಾರಿ ಗಿಫ್ಟ್ ಆಸೆಗೆ ಬಿದ್ದ ಮಹಿಳೆ ಹಂತಹಂತವಾಗಿ ಒಟ್ಟು 10,99,900 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿದ್ದಾರೆ.

10 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿಸಿದರೂ ಸಹ ಅಪರಿಚಿತನ ದುಬಾರಿ ಗಿಫ್ಟ್ ಬರದೆ ಇದ್ದಾಗ ಅನುಮಾನಗೊಂಡ ಶಾಂತಿನಗರದ ಮಹಿಳೆ ತುಮಕೂರು ಸೈಬರ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಇಂತಹ ಅಪರಿಚಿತ ಗಿಫ್ಟ್ ಹಾಗೂ ಶೀಘ್ರ ಹಣ ಮಾಡುವ ವಿಚಾರದ ಹಿಂದೆ ಮೋಸದ ಉದ್ದೇಶ ಇರುತ್ತದೆ ಎನ್ನುವುದನ್ನು ಅರಿಯದ ಮಹಿಳೆ ಹಣವನ್ನು ಕಳೆದುಕೊಂಡಿದ್ದಾಳೆ.

 

 

Share this Article
Verified by MonsterInsights