ಫಿಟ್ನೋಹಿಲಿಕ್ ಜಿಮ್‌ನ ವತಿಯಿಂದ ಸದಸ್ಯರ ಸ್ಪರ್ಧೆ-2023
ತುಮಕೂರು : ಸಮಾಜದಲ್ಲಿರುವ ದುರ್ಬಲರಿಗೆ, ಬಡ ಮಕ್ಕಳಿಗೆ ಆರ್ಥಿಕ, ಆರೋಗ್ಯ, ಶಿಕ್ಷಣ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ತುಮಕೂರಿನ ಫಿಟ್ನೋಹಿಲಿಕ್ ಜಿಮ್‌ನ ಮುಖ್ಯಸ್ಥರಾದ ಶರ್ಮಿಳಾ ಅಮರ್‌ರವರು ತಿಳಿಸಿದರು.
ನಗರದ ಬಿ.ಹೆಚ್.ರಸ್ತೆಯ ಫಿಟ್ನೋಹಿಲಿಕ್ ಜಿಮ್‌ನ ವತಿಯಿಂದ ಸದಸ್ಯರ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾಗೃತಿ ವಹಿಸಬೇಕು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಗುಲುವ ರೋಗಗಳಿಂದ ಮುಕ್ತಿ ಹೊಂದಬಹುದು, ಹಾಗೂ ಸ್ಚಚ್ಛ ದೇಶವನ್ನು ನಿರ್ಮಾಣ ಮಾಡುವುದು ಮುಖ್ಯ ಎಂದರು.
ವ್ಯಾಯಾಮದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು, ಆರೋಗ್ಯಕ್ಕೆ ಹಾನಿತರುವಂತಹ ಹವ್ಯಾಸಿಗಳು ಧೂಮಪಾನ ಹಾಗೂ ಮಾನಸಿಕ ಒತ್ತಡಗಳಿಂದ ದೂರವಿರುವುದಕ್ಕೆ ಜೆಮ್ಸ್ ಅಗತ್ಯವಾಗಿದೆ. ಪ್ರತಿವರ್ಷದಂತೆ ದೈಹಿಕ ತರಬೇತಿಯೊಂದಿಗೆ, ಸಮಾಜದ ಕಳಕಳಿಯನ್ನು ಹೊಂದಿರುವ ನಮ್ಮ ಹೆಲ್ತ್ ಕ್ಲಬ್ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತುಮಕೂರು ಜನತೆಗೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಿಟ್ನೋಹಿಲಿಕ್ ಜಿಮ್‌ನ ಸದಸ್ಯರಿಗೆ ನೂತನ ಹೊಸ ವರ್ಷದ ದಿನಾಚರಣೆಯ ಶುಭಾಷಯಗಳು ಕೋರಿದರು.
ಇದೇ ಸಂದರ್ಭದಲ್ಲಿ ಫಿಟ್ನೋಹಿಲಿಕ್ ಜಿಮ್‌ನ ಮುಖ್ಯಸ್ಥರಾದ ಶರ್ಮಿಳಾ ಅಮರ್, ಹಾಗೂ ಜಿಮ್‌ನ ಸದಸ್ಯರುಗಳು ಭಾಗವಹಿಸಿದ್ದರು.