ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಆಪ್ತ , ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕ ರಕ್ಷಿತ್ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಗರದ ಪ್ರವಾಸಿ ಮಂದಿರದಲ್ಲಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಚೇರಿ ಬಳಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಮುನ್ನ ಈ ಘಟನೆ ನಡೆದಿದೆ.
ಆರೋಗ್ಯ ತಪಾಸಣೆ ಹಾಗೂ ಮೋದಿ ಹುಟ್ಟುಹಬ್ಬದ ಅಂಗವಾಗಿ ಸಾಕಷ್ಟು ಜನ ಸೇರಿದ್ದ ವೇಳೆ ತಳ್ಳಾಟ, ನೂಕಾಟದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಕಾಲನ್ನು ರಕ್ಷಿತ್ ತುಳಿದಿದ್ದರಿಂದ ಸಿಟ್ಟಿಗೆದ್ದ ಸೊಗಡು ಶಿವಣ್ಣ ಬೈದಿದ್ದಾರೆ.
ಇದರಿಂದಾಗಿ ರಕ್ಷಿತ್- ಸೊಗಡು ಶಿವಣ್ಣ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಮಾಜಿ ಸಚಿವರು ರಕ್ಷಿತ್ ಕಪಾಳಕ್ಕೆ ಬಾರಿಸಿದ್ದಾರೆ. ಕೊನೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮಧ್ಯೆ ಪ್ರವೇಶಿಸಿ ಸಮಾಧಾನಗೊಳಿಸಿದರು ಸೊಗಡು ಶಿವಣ್ಣ ಸಿಟ್ಟಾಗಿಯೇ ಕಾರ್ಯಕ್ರಮದಿಂದ ಹೊರನಡೆದರು.