ತುಮಕೂರು: ಅಂದರ್ – ಬಾಹರ್ ಆಟ ಆಡುತ್ತಿದ್ದ ಏಳು ಮಂದಿಯನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿ 71 ಸಾವಿರ ಹಣವನ್ನು ವಶಕ್ಕೆ ಪಡೆದಿರುವ ಘಟನೆ ಸಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿರಾದ ಬನ್ನಿ ನಗರದಿಂದ ಜ್ಯೋತಿನಗರಕ್ಕೆ ಹೋಗುವ ಸರ್ಕಾರಿ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ದುರುಗಪ್ಪ , ಕುಮಾರ್, ನಾಗರಾಜು, ಅರುಣ್, ಗೋವಿಂದರಾಜು, ರವಿ, ಮಂಜುನಾಥ ಅವರನ್ನು ಬಂಧಿಸಿ ಪಣಕ್ಕಿಟ್ಟಿದ್ದ 71,190/-ರೂ ನಗದು ಹಣ, 07 ಮೊಬೈಲ್ ಫೋನ್ ಗಳು ಹಾಗೂ 4 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿ.ಇ.ಎನ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ರಾಮಕೃಷ್ಣಯ್ಯ. ಸಿ.ಹೆಚ್. ರವರ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ ಕುಮಾರ್ ಸಿಬ್ಬಂದಿಗಳಾದ ಇನಾಯತ್ ಉಲ್ಲಾ ಖಾನ್, ದ್ವಾರಕೀಶ್, ಚಿಕ್ಕಣ್ಣ, ಕುಮಾರ ನಾಯ್ಕ, ಕಿರಣ್, ಕೇಶವ ಅವರು ದಾಳಿ ನಡೆದಿದ್ದಾರೆ.