ತುಮಕೂರು: ಮುಂದಿನ ಚುನಾವಣೆಗೆ ನಿಲ್ಲೋದಿಲ್ಲ ಆದರೆ ಯಾರನ್ನ ಗೆಲ್ಲಿಸಬೇಕು, ಸೋಲಿಸಬೇಕು ಎನ್ನುವ ರಾಜಕಾರಣದಿಂದ ಹಿಂದೆ ಹೋಗೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದರು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಅಧಿಕಾರದಲ್ಲಿದ್ದಾಗಲೇ ಸಚಿವರು ಪ್ರಕಟಿಸಿದ್ದಾರೆ.
ನನ್ನ ಅಧಿಕಾರವಧಿ ಮುಗಿಯುವದರೊಳಗೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಿಸುತ್ತೇನೆ, ಜಿಲ್ಲಾ ಕೇಂದ್ರ ಆಗಲು ಅಗತ್ಯವಿರುವ ಸೌಕರ್ಯಗಳನ್ನು ಮಾಡುತ್ತಿದ್ದು, ಚುನಾವಣೆಗಾಗಿ ಈ ಕೆಲಸವನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.