ತಿಪಟೂರು: ಶಾಲೆಗೆ ಬಿಡಲು ಮಗಳನ್ನು ಹೋದ ತಾಯಿ-ಮಗಳಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ತಿಪಟೂರು ತಾಲ್ಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕು ರಾಮಶೆಟ್ಟಿಹಳ್ಳಿ ಗ್ರಾಮದ ಹೆದ್ದಾರಿಯಲ್ಲಿ ದುರಂತ ನಡೆದಿದ್ದು, ತಾಯಿ ಕಮಲ, ಮಗಳು ವೀಣಾ ಬಲಿಯಾಗಿದ್ದಾರೆ.
ಗೀತಾಂಜನೇಯ ಗಾರ್ಮೆಂಟ್ಸ್ ಗೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಪಾದಾಚಾರಿ ಮುದ್ದಪ್ಪ (50) ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.
ಗ್ರಾಮಸ್ಥರ ಆಕ್ರೋಶ
ಹುಚ್ಚನಹಟ್ಟಿ, ರಾಮಶೆಟ್ಟಿಹಳ್ಳಿ , ದೊಡ್ಡ ಮಾರ್ಪನಹಳ್ಳಿ, ಹಿಡೇನಹಳ್ಳಿ ಗ್ರಾಮಸ್ಥರು ಅಂಡರ್ ಪಾಸ್ ಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ.
ಇದೇ ಜಾಗದಲ್ಲಿ ಈವರಗೆ ಐವರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಶವಗಳನ್ನು ಎತ್ತದೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನೆಡೆದಿದೆ ಎಂದು ತಿಳಿದು ಬಂದಿದೆ.