ತುಮಕೂರು: ನಿಮಗಿನ್ನೂ ಗೃಹಲಕ್ಷ್ಮೀ ಹಣ ಬಂದಿಲ್ವ,, ಆನ್ ಲೈನ್ ಮೂಲಕ ನಿಮ್ಮ ಗೃಹಲಕ್ಷ್ಮೀ ಸ್ಟೇಟಸ್ ಚೆಕ್ ಮಾಡೋಕು ಮುಂಚೆ ಎಚ್ಚರಿಕೆ ವಹಿಸದೇ ಇದ್ದರೆ, ಸೈಬರ್ ಕಳ್ಳರು ನಿಮ್ಮ ಅಕೌಂಟಿನಲ್ಲಿರೋ ಹಣವನ್ನೆಲ್ಲ ಖಾಲಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಅನೇಕ ಹೆಣ್ಣು ಮಕ್ಕಳ ಪಾಲಿಗೆ ವರದಾನವಾಗಿ ಪರಿಣಮಿಸಿದ್ದು, ಸರ್ಕಾರ ಕಳೆದ ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಆಗಸ್ಟ್ ತಿಂಗಳಲ್ಲಿ ಹಾಕುತ್ತಿರುವುದರಿಂದ ಸೈಬರ್ ಕಳ್ಳರು “ಗೃಹ ಲಕ್ಷ್ಮೀ” ಮೇಲೆ ಕಣ್ಣಿಟ್ಟಿದ್ದಾರೆ.
ಗೃಹಲಕ್ಷ್ಮೀ ಹಣ ಇನ್ನು ನಿಮ್ಮ ಖಾತೆಯನ್ನು ತಲುಪಿಲ್ಲ ಎಂದು ಆನ್ ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡಲು ಹೋದರೆ, ಸೈಬರ್ ಕಳ್ಳರು ಸೃಷ್ಟಿಸಿರುವ ನಕಲಿ ವೆಬ್ ಸೈಟ್ ಗಳು, ಲಿಂಕ್ ಗಳು ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿರುವ ಹಣವನ್ನು ಕದಿಯಲು ಸುಲಭ ದಾರಿಯನ್ನು ಮಾಡಿಕೊಡಲಿದೆ.
ಸದ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸೇವಾಸಿಂಧುಗೆ ಅವಕಾಶ ನೀಡಿದ್ದು, “ಗೃಹಲಕ್ಷ್ಮೀ” ಯೋಜನೆ ಹೆಸರಿನಲ್ಲಿ ಸಾಕಷ್ಟು ವೆಬ್ ಸೈಟ್ ಗಳು ಕಾಣಿಸುತ್ತಿರುವುದರಿಂದ ಜನರು ಸುಲಭವಾಗಿ ಯಾಮಾರುವ ಸಾಧ್ಯತೆ ಹೆಚ್ಚಾಗಿದ್ದು, ಗೃಹಲಕ್ಷ್ಮೀ ಹಣಕ್ಕಾಗಿ ಆತುರ ತೋರಿ ಸೈಬರ್ ಕಳ್ಳರು ಸೂಚಿಸಿದ್ದಂತೆ ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಓಟಿಪಿ ನೀಡಿದರೆ ಗೃಹಲಕ್ಷ್ಮೀಯೊಂದಿಗೆ ನಿಮ್ಮ ಖಾತೆಯಲ್ಲಿರುವ ಹಣವೂ ಸೈಬರ್ ಕಳ್ಳರ ಕೈ ಸೇರಲಿದೆ.
ಗೃಹಲಕ್ಷ್ಮೀ ಸ್ಟೇಟಸ್ ಚೆಕ್ ಮಾಡಿಕೊಳ್ಳುವಾಗ ಬೇರೆ ಯಾವುದೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದಾಗಲಿ, ಆಧಾರ್ ಓಟಿಪಿಯನ್ನು ಹೇಳುವುದಾಗಲಿ, ಎಂಪಿನ್ ನಂಬರ್ ತಿಳಿಸಿದಂತೆ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದು, ಸ್ಟೇಟಸ್ ಚೆಕ್ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆ ಖಾಲಿಯಾಗುವುದು ಖಚಿತ ಎನ್ನಲಾಗಿದೆ.