ತುಮಕೂರು: ನಗರದ ಹೃದಯ ಭಾಗದಲ್ಲಿರುವ ಎರಡು ಚಿನ್ನಾಭರಣ ಅಂಗಡಿಗಳ ಬೀಗ ಹೊಡೆದು ಕಳ್ಳತನಕ್ಕೆ ಯತ್ನಿಸಲಾಗಿದೆ.
ತುಮಕೂರು ನಗರ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಗುಂಚಿ ಸರ್ಕಲ್ ನಲ್ಲಿರುವ ಸುನೀಲ್ ಮತ್ತು ರಾಜೇಂದ್ರ ಗಿರವಿ, ಚಿನ್ನಾಭರಣ ಅಂಗಡಿಗಳ ಮುಂಭಾಗದ ಬೀಗ ಹೊಡೆದಿರುವ ಕಳ್ಳರು, ಅಂಗಡಿಗಳ ಒಳಕ್ಕೆ ಹೋಗಲು ವಿಫಲ ಯತ್ನ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ವೇಳೆ ಕಳ್ಳರು ಬೀಗ ಹೊಡೆದಿದ್ದು, ಬೆಳಿಗ್ಗೆ ಅಂಗಡಿ ಮಾಲೀಕರು ಬಂದಾಗ ವಿಷಯ ಗೊತ್ತಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.