ಕನ್ನಡದಲ್ಲಿ 2016ರಲ್ಲಿ ತೆರೆಗೆ ಬಂದ ಊಜಾ ಸಿನಿಮಾದಲ್ಲಿ ನಾಯಕಿಯಾಗಿದ್ದ ಕಾದಂಬರಿ ಜೇತ್ವಾನಿ ಅವರಿಗೆ ಆಂಧ್ರ ಪ್ರದೇಶದ ರಾಜಕಾರಣಿ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ವೈಎಸ್ಆರ್ ಪಿ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾಸಾಗರ್ ಎಂಬಾತ, ನಟಿ ಕಾದಂಬರಿ ಹಾಗೂ ಅವರ ಕುಟುಂಬದವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಒಂದೂವರೆ ತಿಂಗಳು ಜೈಲಿಗೆ ಹಾಕಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಕಾದಂಬರಿ ಹಾಗೂ ಅವರ ಕುಟುಂಬದವರನ್ನು ಅಪಹರಿಸಿ, ಗೆಸ್ಟ್ ಹೌಸ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದು, ಆಂಧ್ರಪ್ರದೇಶದಲ್ಲಿ ಚಂದ್ರಬಾಬುನಾಯ್ಡು ಅವರು ಮುಖ್ಯಮಂತ್ರಿ ಆದ ನಂತರ ನಾನು ನನ್ನ ಕುಟುಂಬದವರ ಬಿಡುಗಡೆಯಾಗಿದೆ ಎಂದು ಕಾದಂಬರಿ ಲೈವ್ ನಲ್ಲಿ ತಿಳಿಸಿದ್ದಾರೆ.
ಜಿಂದಾಲ್ ಸಮೂಹದ ವ್ಯಕ್ತಿಯೊಬ್ಬರ ಮೇಲೆ ಕಾದಂಬರಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದು, ಆ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿ ಕುಕ್ಕಲ ವಿದ್ಯಾಸಾಗರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಹಾಗೂ ಕುಟುಂಬದವರಿಗೆ ಚಿತ್ರ ಹಿಂಸೆ ನೀಡಿದ್ದಾರೆ, ನನ್ನ ತಂದೆಗೆ ಕಿವಿ ಕೇಳಿಸದಂತೆ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ.