ತುಮಕೂರು: ಅನಾರೋಗ್ಯ ಸಮಯದಲ್ಲಿ ಪಡೆದುಕೊಂಡ 2.5 ಲಕ್ಷ ಸಾಲಕ್ಕೆ 22.5 ಲಕ್ಷ ಬಡ್ಡಿಕೊಟ್ಟರು ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ಕೊರಟಗೆರೆ ಮೂಲದ ವ್ಯಕ್ತಿಯೊಬ್ಬರು ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಗದೊಡ್ಡಿಯ ಜಿ.ವಿ.ವೀರೇಂದ್ರಪ್ರಸಾದ್ ಅವರು, ಕಳೆದ 15 -20 ವರ್ಷಗಳ ಹಿಂದೆ ತನ್ನ ಹಳೆಯ ಸ್ನೇಹಿತ ಕುಣಿಗಲ್ ಟೌನ್ ರಾಘವೇಂದ್ರ ಪ್ರಸಾದ್ ಎಂಬಾತನಿಂದ ಅನಾರೋಗ್ಯ ನಿಮಿತ್ತ 2.5 ಲಕ್ಷ ರೂ.ಗಳನ್ನ ತುರ್ತು ಆರೋಗ್ಯ ಚಿಕಿತ್ಸೆಗಾಗಿ ಶೇ.10ರ ಬಡ್ಡಿಗೆ ಹಣ ಪಡೆದದು ಹತ್ತಾರು ವರ್ಷಗಳ ಕಾಲ ಬಡ್ಡಿ ಕಟ್ಟಿರುವುದಾಗಿ ತಿಳಿಸಿದ್ದಾರೆ.
ಇದಲ್ಲದೇ ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ್ದ ಖಾಲಿ ಚೆಕ್ ಗಳನ್ನು ಬೌನ್ಸ್ ಮಾಡಿಸಿ ಕುಣಿಗಲ್ ನ್ಯಾಯಾಲಯದಲ್ಲಿ 3.5 ಲಕ್ಷ ಹಣ ಪಡೆದುಕೊಂಡಿದ್ದು, ತುಮಕೂರಿನಲ್ಲಿದ್ದ ನಿವೇಶನವನ್ನು ನನಗೆ ಗೊತ್ತಿಲ್ಲದಂತೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದರು ಸಹ ಹಣ ನೀಡುವಂತೆ ಕಿರುಕುಳು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೀಟರ್ ಬಡ್ಡಿ ದಂಧೆಕೋರರಿಂದ ರಕ್ಷಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೋಲಿಸ್ ಮಹಾ ನಿರ್ದೇಶಕರ ಬಳಿ ಮನವಿ ಮಾಡಿಕೊಂಡಿದ್ದು, ರಾಜ್ಯಪಾಲರಿಗೆ ನನಗೆ ದಯಾಮರಣ ನೀಡಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಆತನ ಸಾಲ ತೀರುವಳಿಯಾಗಿದ್ದರು ಸಹ ಹತ್ತಾರು ಜನರನ್ನು ಕರೆದುಕೊಂಡು ಬಂದು ಬಾಯಿಗೆ ಬಂದಂತೆ ಅಶ್ಲೀಲವಾಗಿ ಮಾತನಾಡುತ್ತಾ ರೌಡಿಗಳ ರೀತಿಯಲ್ಲಿ ವರ್ತಿಸುತ್ತಿದ್ದು, ದೌರ್ಜನ್ಯಕ್ಕೆ ಸಿಲುಕಿದ್ದೇನೆ ರಾಘವೇಂದ್ರ ಪ್ರಸಾದ್‌ನಿಂದ ಸಾಲಬಾಧೆಗೆ ತುಂಬಾ ನೋವು ಅನುಭವಿಸಿದ್ದೇನೆ, ಹಣದ ಎಲ್ಲಾ ವ್ಯವಹಾರ ಪೂರ್ಣಗೊಂಡಿದರೂ ಸಹ ಕಿರುಕುಳ ಮಾತ್ರ ತಪ್ಪಿಲ್ಲ ಈತನಿಂದ ನನಗೆ ರಕ್ಷಣೆ ಕೊಡಿಸಿ ಇಲ್ಲವೇ ದಯಾ ಮರಣ ಅವಕಾಶ ಕೊಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.