ತುಮಕೂರು: ರಾಜ್ಯ ಸರ್ಕಾರ ಜಿಲ್ಲೆಯ ಮೂವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಸಾಹಿತಿಗಳಾದ ಡಾ.ನಟರಾಜ್ ಹುಳಿಯಾರ್, ನಟರಾಜ ಬೂದಾಳು ಹಾಗೂ ಪ್ರಜಾವಾಣಿ ಹಿರಿಯ ಸಂಪಾದಕ ಚ.ಹ.ರಘುನಾಥ್ ಅವರು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲಾಗಿದೆ.
ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಡಾ.ನಟರಾಜ್ ಹುಳಿಯಾರ್, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಸಿಂಡಿಕೇಟ್ ಸದಸ್ಯರಾಗಿ ಚ.ಹ.ರಘುನಾಥ್, ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರದ ಸಿಂಡಿಕೇಟ್ ಸದಸ್ಯರಾಗಿ ನಟರಾಜ ಬೂದಾಳು ಅವರನ್ನು ಸರ್ಕಾರ ನೇಮಕ ಮಾಡಿದೆ.
ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ. ಷರೀಫಾ, ಡಾ. ಬಂಜಗೆರೆ ಜಯಪ್ರಕಾಶ್, ಬಿ. ಪೀರ್ ಬಾಷಾ, ಕೆ.ಪಿ. ಶ್ರೀಪಾಲ್, ಆಯೆಷಾ ಫರ್ಜಾನಾ, ಎನ್ ಎ ಎಂ ಇಸ್ಮಾಯಿಲ್, ಡಾ ಎಚ್ ಎಸ್ ಅನುಪಮಾ, ಸಿದ್ದಪ್ಪ ಮೂಲಗೆ, ಡಾ. ಮೀನಾಕ್ಷಿ ಖಂಡಿಮಠ, ಡಾ ಯು.ಬಿ. ಸುಮಾ, ಡಾ. ಕೆ ಫಣಿರಾಜ್, ಎನ್ ಎ ಎಂ ಇಸ್ಮಾಯಿಲ್, ಸೋಮಶೇಖರ ಬಣ್ಣದ ಮನೆ, ಬಿ ಆರ್ ಪಾಟೀಲ್, ಪ್ರೊ. ಶಿವಕುಮಾರ್ ಎಂ, ಮುಸಾಪೀರ್ ಭಾಷಾ, ಲಕ್ಷ್ಮೀಕಾಂತ ಚಿಮನೂರು, ಪ್ರೊ ಸಾಕಮ್ಮ, ಡಾ. ಶ್ರೀದೇವಿ ಎಸ್ ಕಟ್ಟಿಮನಿ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ದಿನಾಂಕ 27.08.2024ರಂದು ಅಧಿಸೂಚನೆ ಹೊರಡಿಸಿದೆ.