ತುಮಕೂರು: ನೇತ್ರವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಜನಪ್ರಿಯವಾಗಿರುವ ನೇತ್ರಧಾಮ, ಬೆಂಗಳೂರಿನ ವೈಟ್‍ಫೀಲ್ಡ್‍ನಲ್ಲಿ ತನ್ನ ಹೊಸ ಸೂಪರ್ ಸ್ಪೆಷಾಲಿಟಿ ನೇತ್ರ ಆರೈಕೆ ಆಸ್ಪತ್ರೆ ಆರಂಭಿಸಿದೆ. ಇದರೊಂದಿಗೆ ವಿಶ್ವದರ್ಜೆಯ ನೇತ್ರ ಆರೈಕೆಯನ್ನು ಒದಗಿಸುವ ತನ್ನ ಗುರಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಈ ಅತ್ಯಾಧುನಿಕ ಸೌಲಭ್ಯವು ನೇತ್ರಧಾಮ ಬ್ಯಾನರ್ ಅಡಿಯಲ್ಲಿ ಕರ್ನಾಟಕದ ಒಂಬತ್ತನೇ ಕೇಂದ್ರವಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬದುಕುಳಿದ 26 ವರ್ಷದ ಸಂತ್ರಸ್ತೆ ಪಿ.ಆರ್.ನಾಗಶ್ರೀ ವೈಟ್‍ಫೀಲ್ಡ್ ಕೇಂದ್ರವನ್ನು ಉದ್ಘಾಟಿಸಿದರು. ಘಟನೆಯಲ್ಲಿ ನಾಗಶ್ರೀ ಅವರ ಬಲಗಣ್ಣಿನ ದೃಷ್ಟಿ ಸಂಪೂರ್ಣ ನಾಶವಾಯಿತು, ನೇತ್ರಧಾಮದ ಪರಿಣಿತ ತಂಡವು ನಡೆಸಿದ ಸಂಕೀರ್ಣ ಮತ್ತು ಸುಧಾರಿತ ಸರಣಿ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಅವರು ತಮ್ಮ ದೃಷ್ಟಿಯ ಶೇಕಡಾ 80-90 ರಷ್ಟನ್ನು ಮರು ಪಡೆದಿದ್ದಾರೆ ಎಂದು ನೇತ್ರಧಾಮದ ಅದ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಟ್‍ಫೀಲ್ಡ್ ಕೇಂದ್ರವು ಇತ್ತೀಚಿನ ನೇತ್ರ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಸುಧಾರಿತ ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ ಸಮಗ್ರ ಶ್ರೇಣಿಯ ನೇತ್ರ ಆರೈಕೆ ಸೇವೆಗಳನ್ನು ಒದಗಿಸುತ್ತದೆ.
ನೇತ್ರಧಾಮದ ಸಿಇಒ ಮತ್ತು ನಿರ್ದೇಶಕರಾದ ಡಾ.ಸುಮನಶ್ರೀ, ನೇತ್ರಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ ಸುಪ್ರಿಯಾ ಗಣೇಶ್, ವಿಟ್ರೆಕ್ಟಮಿಯನ್ನು ಅಕ್ಷಿಪಟಲ ತಜ್ಞ ಡಾ. ಟಿ ಎಂ ಪ್ರದೀಪ್ ಮಾತನಾಡಿದರು.
ಶ್ರೇಷ್ಠತೆಗೆ ನೇತ್ರಧಾಮದ ಬದ್ಧತೆಯು ಕ್ಲಿನಿಕಲ್ ಆರೈಕೆಯನ್ನು ಮೀರಿ ವಿಸ್ತರಿಸಿದೆ. ಇದು ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ ನಿಂದ ಮಾನ್ಯತೆ ಪಡೆದ ಮೊದಲ ಭಾರತೀಯ ಕಣ್ಣಿನ ಆಸ್ಪತ್ರೆಯಾಗಿದೆ ಮತ್ತು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕ್ವಾಲಿಟಿ ಹೆಲ್ತ್ ಕೇರ್‍ನಿಂದ ಗುರುತಿಸಲ್ಪಟ್ಟಿದೆ.