ಪಾವಗಡ: ರಾಸಾಯನಿಕ ಬೆರತ ನೀರು ಸೇವನೆಯಿಂದ 20 ಕುರಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ತಾಲ್ಲೂಕಿನ ರಾಜವಂತಿ ಗ್ರಾಮದಲ್ಲಿ ನಡೆದಿದೆ.
ರಾಜವಂತಿ ಗ್ರಾಮದ ಧರ್ಮಪ್ಪ s/o ಕಾಮಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಹೂವಿನ ಗಿಡಗಳಿಗೆ ಸಿಂಪಡಿಸುವಂತಹ ರಾಸಾಯನಿಕ ಪದಾರ್ಥಗಳು ನೀರಿನಲ್ಲಿ ಮಿಶ್ರಣಗೊಂಡಿದ್ದು
ರಾಸಾಯನ ಮಿಶ್ರಣಗೊಂಡ ನೀರನ್ನ ಕುರಿಗಳು ಸೇವನೆ ಮಾಡಿದ ಪರಿಣಾಮವಾಗಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ನಂತರ ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕುರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.