ತುಮಕೂರು: ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ಮೂರು ವರ್ಷ ಕಚೇರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಪ್ಪಲಿ ಸವೆಸಿದರು, ಯಾವುದೇ ಉಪಯೋಗವಾಗದೇ ಇರುವ ಘಟನೆ ಗುಬ್ಬಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕೆರೆ ಕಾಲೋನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶೌಚಾಲಯ ನಿರ್ಮಿಸುವಂತೆ ಮೂರು ವರ್ಷಗಳಿಂದ ಕಚೇರಿಗಳಿಗೆ ಹಾಲೇದರೂ ಶೌಚಾಲಯ ನಿರ್ಮಾಣವಾಗದೆ ಇರುವುದು ಬೇಸರ ತಂದಿದೆ.
ಈಗಾಗಲೇ ಮಾನ್ಯ ಶಾಸಕರ ಗಮನಕ್ಕೂ ತಂದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪೋಷಕರು ಮೂರು ವರ್ಷಗಳಿಂದ ಶೌಚಾಲಯವಿಲ್ಲದೆ ಬಯಲು ಶೌಚಾಲಯ ಬಳಸುತ್ತಿರುವ ಮಕ್ಕಳು ಹಾಗೂ ಶಾಲಾ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರು ದುರಸ್ತಿ ಮಾಡುವುದಾಗಲಿ ಅಥವಾ ನೂತನ ಶೌಚಾಲಯ ನಿರ್ಮಿಸುವುದಾಗಲಿ ಮಾಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಪೋಷಕರಿಂದ ನೇರ ಆರೋಪ ಕೇಳಿ ಬರುತ್ತಿದೆ.
ಸರ್ಕಾರಿ ಶಾಲೆಯಲ್ಲಿ 28 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಒಂದನೇ ತರಗತಿಯಿಂದ ಐದನೇ ತರಗತಿವರೆಗೂ ಶಾಲಾ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದು ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಸಹ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿಕೊಡುತ್ತಿದ್ದು ಇದರಲ್ಲಿ ಒಬ್ಬರು ಮಹಿಳಾ ಶಿಕ್ಷಕರಿದು ತುರ್ತು ಸಂದರ್ಭದಲ್ಲಿ ಶೌಚಾಲಯವನ್ನು ಬಳಸಿಕೊಳ್ಳಲು ಶೌಚಾಲಯವು ಶಿತಲಗೊಂಡಿದ್ದು ಬಳಸಲು ಯೋಗ್ಯವಲ್ಲದ ಶೌಚಾಲಯವಾಗಿ ಕಂಡುಬರುತ್ತಿದ್ದು ಇದನ್ನು ರಿಪೇರಿ ಅಥವಾ ದುರಸ್ತಿ ಪಡಿಸಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಪ್ರಜ್ಞಾವಂತ ಯುವಕರು ಬೇಸರ ವ್ಯಕ್ತಪಡಿಸಿದರು .
ದುರಸ್ತಿಯಲ್ಲಿರುವ ಶೌಚಾಲಯ ಬಳಸಲು ಯೋಗ್ಯವಲ್ಲದೆ ಶೌಚಾಲಯದ ಬಾಗಿಲಿಗೆ ಬಾಗಿಲೆ ಇಲ್ಲದಂತಾಗಿದೆ ಹಾಗೂ ಶೌಚಾಲಯವನ್ನು ಉಪಯೋಗಿಸಿ ತದನಂತರ ಹೊರಭಾಗದಿಂದ ನೀರನ್ನು ತಂದು ಶೌಚಾಲಯಕ್ಕೆ ಹಾಕಿದರೆ ಪೂರ್ಣ ಪ್ರಮಾಣದ ನೀರು ಹರಿದು ಹೋಗದೆ ಅಲ್ಲೇ ನಿಲ್ಲುತ್ತದೆ ಶೌಚಾಲಯದ ಗುಂಡಿ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದು ಇದನ್ನು ದುರಸ್ತಿ ಪಡಿಸುವಲ್ಲಿ ಸ್ಥಳೀಯ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸ್ಥಳೀಯ ಪೋಷಕರು ಮತ್ತು ಗ್ರಾಮಸ್ಥರ ಆರೋಪವಾಗಿದೆ .
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ನೂರಾರು ಬಾರಿ ಮನವಿ ಮಾಡಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಎಸ್ ಟಿ ಎಂ ಸಿ ಮಂಡಳಿ ಮತ್ತು ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಶಾಲೆಗೆ ದಿಢೀರ್ ಭೇಟಿ ನೀಡಿ ಶೌಚಾಲಯ ನಿರ್ಮಿಸಬೇಕು ಮತ್ತು ಶೌಚಾಲಯ ನಿರ್ಮಿಸುವವರೆಗೂ ತಾತ್ಕಾಲಿಕ ಶೌಚಾಲಯ ರಿಪೇರಿ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶೌಚಾಲಯಕ್ಕೋಸ್ಕರ ಪೋಷಕರು ಮತ್ತು ಜೊತೆಗೂಡಿ ಜಿಲ್ಲಾ ಕಛೇರಿ ಮುಂದೆ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಪೋಷಕರಿಂದ ಹಾಗೂ ಗ್ರಾಮದ ಯುವಕರಿಂದ ಕೇಳಿ ಬರುತ್ತಿದೆ.