ತುಮಕೂರು: ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಐ ಲವ್ ಯೂ, ಐ ಮಿಸ್ ಯೂ, ಐ ಹಗ್ ಯೂ, ಐ ಕಿಸ್ ಯೂ ಎಂದು ಕಾಮುಕ ಶಿಕ್ಷಕ ಪೀಡಿಸಿರುವ ಘಟನೆ ಹೆಬ್ಬೂರು ನರಸಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದಿದೆ.
ಗಡಿ ತಾಲ್ಲೂಕಿನ ವಿದ್ಯಾರ್ಥಿನಿ 6 ನೇ ತರಗತಿ ವ್ಯಾಸಂಗಕ್ಕಾಗಿ ತುಮಕೂರು ತಾಲ್ಲೂಕು ಹೆಬ್ಬೂರು ನರಸಾಪುರದ ಬಳಿ ಇರುವ ಮೊರಾರ್ಜಿ ವಸತಿ ಶಾಲೆಗೆ ದಾಖಲಾಗಿದ್ದು, ಕಳೆದ ಆಗಸ್ಟ್ ತಿಂಗಳಿಂದಲೇ ಸಮಾಜಶಾಸ್ತ್ರ ಶಿಕ್ಷಕ ರವೀಂದ್ರ ಅವರು ಪದೇಪದೇ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೊರಾರ್ಜಿ ಶಾಲೆಯಲ್ಲಿ ನಡೆದ ವೆಲ್ಕಮ್ ಪಾರ್ಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೀರೆಯುಟ್ಟು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಮಾಜಶಾಸ್ತ್ರ ಶಿಕ್ಷಕ ರವೀಂದ್ರ ಅವರು ವಿದ್ಯಾರ್ಥಿನಿಗೆ ಸೀರೆಯಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೆ, ಮುಂದಿನ ಜನ್ಮದಲ್ಲಿ ಮದುವೆಯಾದರೆ ನಿನ್ನನ್ನೇ ಆಗುತ್ತೇನೆ ಎಂದು ಗಂಟು ಬಿದ್ದಿದ್ದಾನೆ.
ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ವಿದ್ಯಾರ್ಥಿನಿ ಪ್ರಾಂಶುಪಾಲೆ ಹಾಗೂ ಶಿಕ್ಷಕಿಯರಿಗೆ ಮಾಹಿತಿ ನೀಡಿದ್ದಾಳೆ, ನಂತರ ಸೋದರ ಮಾವನೊಂದಿಗೆ ಹೋಗಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.