ಮಧುಗಿರಿ: ಮೂರು ಜನ ಹುಡುಗರ ತಂಡ ನಕಲಿ ನೋಟು ಚಲಾಯಿಸಿ ಮೊಬೈಲ್ ಖರೀದಿಸಲು ಪ್ರಯತ್ನಿಸಿ ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದಿರುವ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಧುಗಿರಿ ಪಟ್ಟಣದ ವಿ ಆರ್ ಎಸ್ ಟಿ ರಸ್ತೆಯಲ್ಲಿರುವ ಬಯಲುಬಸವೇಶ್ವರ ಮೊಬೈಲ್ ಅಂಗಡಿಯಲ್ಲಿ ಸೋಮವಾರ ಸಂಜೆ 6:30 ರಲ್ಲಿ ಮೂರು ಜನ ಹುಡುಗರ ತಂಡ ಮೊಬೈಲ್ ಅಂಗಡಿಗೆ ತೆರಳಿ ಕಡಿಮೆ ಬೆಲೆಯ ಫೋನ್ ತೋರಿಸಲು ತಿಳಿಸಿದ್ದು, ಅಂಗಡಿಯವರು ಫೋನ್ ತೋರಿಸಿದಾಗ ಹುಡುಗರು ಹತ್ತುವರೆ ಸಾವಿರದ ಫೋನ್ ಇರಲಿ ಎಂದು ತಿಳಿಸಿ 500 ರೂಪಾಯಿ ಮುಖಬೆಲೆಯ 21 ನೋಟುಗಳನ್ನು ಅಂಗಡಿ ಮಾಲೀಕರಿಗೆ ನೀಡಿದ್ದಾರೆ.
ನೋಟುಗಳನ್ನು ಸ್ವೀಕರಿಸಿದ ಅಂಗಡಿ ಮಾಲೀಕನಿಗೆ ನೋಟುಗಳ ಸ್ಪರ್ಶತೆಯಿಂದ ನೋಟುಗಳ ಮೇಲೆ ಅನುಮಾನ ಬಂದು ಹುಡುಗರಿಗೆ ಇದು ಕೋಟ ನೋಟು ನಿಮ್ಮ ಹತ್ತಿರ ಹೇಗೆ ಬಂತು ಎಂದು ಪ್ರಶ್ನಿಸಿದಾಗ, ಹುಡುಗರು ಗಾಬರಿಯಾಗಿ ಅಂಗಡಿಯಿಂದ ಓಡಿ ಹೋಗಿದ್ದು , ಮುಂಜಾಗ್ರತೆ ಕ್ರಮವಾಗಿ ಮೊಬೈಲ್ ಅಂಗಡಿ ಮಾಲೀಕರಾದ ನವೀನ್ ನಕಲಿ ನೋಟುಗಳನ್ನು ಮಧುಗಿರಿ ಪೊಲೀಸ್ ಠಾಣೆಗೆ ಹಿಂದಿರುಗಿಸಿ ಈ ವಿಷಯವಾಗಿ ಪ್ರಕರಣ ದಾಖಲಿಸಿದ್ದಾರೆ.