ಪರಂ ಸಿಎಂ ಆದರೆ ಬೆಂಬಲ ನೀಡುತ್ತೇನೆ: ಬಿ.ಸುರೇಶ್ ಗೌಡ

ಡೆಸ್ಕ್
1 Min Read

ತುಮಕೂರು: ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆದರೆ ನನ್ನ ಬೆಂಬಲ ನೀಡುತ್ತೇನೆ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ, ದಲಿತರು ರಾಜ್ಯದ ಮುಖ್ಯಮಂತ್ರಿಯಾಗಬೇಕು, ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬೇಕು,ಜಿಲ್ಲೆಯ ಒಬ್ಬರು ಮುಖ್ಯಮಂತ್ರಿಯಾದರೆ ನಾನು ನೀಡುವುದಾಗಿ ಘೋಷಿಸಿದರು.

ರಾಜ್ಯದಲ್ಲಿ ಜಾತಿ ಗಣತಿ ವಿಚಾರ ಪ್ರಚಲಿತವಾಗಿದೆ, ಜಾತಿಗಣತಿ ರಾಜಕೀಯ ಅಸ್ತ್ರವಾಗದೇ ಅವಕಾಶವಂಚಿತರಿಗೆ ಅವಕಾಶ ಸಿಗುವಂತಾಗಬೇಕು ಎಂದು ಹೇಳಿದರು.

ಜಾತಿಗಣತಿ ಆಧಾರದ ಮೇಲೆ ರಾಜಕೀಯ ಪಕ್ಷಗಳು ಅವಕಾಶ ವಂಚಿತರಿಗೆ ಟಿಕೆಟ್ ನೀಡಿದರೆ ಮಾತ್ರ ಜಾತಿಗಣತಿ ಸಾರ್ಥಕವಾಗಲಿದೆ, ರಾಜಕೀಯಕ್ಕಾಗಿ ಜಾತಿ ಗಣತಿಗೆ ಮುಂದಾಗಬಾರದು ಎಂದು ಅಭಿಪ್ರಾಯಪಟ್ಟರು.

Share this Article
Verified by MonsterInsights